More

    ಸಲಿಂಗಕಾಮಿ ಸಚಿವ ಗೇಬ್ರಿಯಲ್ ಅಟ್ಟಲ್: ಫ್ರಾನ್ಸ್​ ಪ್ರಧಾನಿಯಾಗಿ ನೇಮಕ

    ಪ್ಯಾರಿಸ್​: 34 ವರ್ಷದ ಶಿಕ್ಷಣ ಸಚಿವ ಗೇಬ್ರಿಯಲ್ ಅಟ್ಟಲ್ ಅವರನ್ನು ಫ್ರಾನ್ಸ್​ನ ಹೊಸ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಲಾಗಿದೆ.

    ತಮ್ಮ ಹೊಸ ಪ್ರಧಾನ ಮಂತ್ರಿಯಾಗಿ ಅಟ್ಟಲ್ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್​ ಮ್ಯಾಕ್ರೋನ್ ಅವರು ಮಂಗಳವಾರ ನೇಮಕ ಮಾಡಿದ್ದಾರೆ.

    ಸಂಸತ್ ಚುನಾವಣೆಗೆ ಮುಂಚಿತವಾಗಿ ತಮ್ಮ ಎರಡನೇ ಜನಾದೇಶಕ್ಕೆ ಅನುವಾಗುವ ನಿಟ್ಟಿನಲ್ಲಿ ನೇಮಕಾತಿಯನ್ನು ಅವರು ಮಾಡಿದ್ದಾರೆ ಎನ್ನಲಾಗಿದೆ.

    ಮ್ಯಾಕ್ರನ್ ಅವರು ಕಳೆದ ವರ್ಷದ ಜನಪ್ರಿಯವಲ್ಲದ ಪಿಂಚಣಿ ಮತ್ತು ವಲಸೆ ಸುಧಾರಣೆಗಳನ್ನು ಕೈಗೊಂಡಿದ್ದರು. ಮ್ಯಾಕ್ರನ್ ಅವರ ಪಾಳಯವು ಬಲಪಂಥೀಯ ನಾಯಕ ಮರೀನ್ ಲೆ ಪೆನ್ ಅವರ ಪಕ್ಷಕ್ಕಿಂತ ಅಂದಾಜು ಎಂಟರಿಂದ ಹತ್ತು ಶೇಕಡಾವಾರು ಮತಗಳಿಂದ ಹಿಂದಿದೆ ಎಂದು ಸಮೀಕ್ಷೆಗಳು ಸೂಚಿಸಿವೆ.

    ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಿ ವಕ್ತಾರರಾಗಿ ಜನಪ್ರಿಯರಾಗಿರುವ ಅಟ್ಟಲ್ ಅವರು ಹಾಲಿ ಪ್ರಧಾನಿ ಎಲಿಸಬೆತ್ ಬೋರ್ನ್ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.

    ಇತ್ತೀಚಿನ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ದೇಶದ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿ ಅಟ್ಟಲ್ ಹೊರಹೊಮ್ಮಿದ್ದಾರೆ. ಅವರು ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಲಿದ್ದಾರೆ. ಈ ಸ್ಥಾನಕ್ಕೇರುವ ಮೊದಲ ಸಲಿಂಗಕಾಮಿ ವ್ಯಕ್ತಿಯಾಗಲಿದ್ದಾರೆ.

    ಪ್ರಧಾನ ಮಂತ್ರಿಯ ಬದಲಾವಣೆಯಿಂದ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ, ಏಕೆಂದರೆ, ಮ್ಯಾಕ್ರನ್ ಅವರೇ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಆದರೆ ಪ್ರತಿಪಕ್ಷದ ನಾಯಕರು ಹೇಳಿದ್ದಾರೆ.

    “ಎಲಿಸಬೆತ್ ಬೋರ್ನ್, ಗೇಬ್ರಿಯಲ್ ಅಟ್ಟಾಲ್ ಅಥವಾ ಬೇರೆಯವರು, ನಾನು ಹೆದರುವುದಿಲ್ಲ, ಅವು ಅದೇ ನೀತಿಗಳಾಗಿರುತ್ತದೆ” ಎಂದು ಸಮಾಜವಾದಿ ಪಕ್ಷದ ನಾಯಕ ಒಲಿವಿಯರ್ ಫೌರ್ ಫ್ರಾನ್ಸ್ ಹೇಳಿದ್ದಾರೆ.

    ಷೇರು ಸೂಚ್ಯಂಕ ಅಲ್ಪ ಏರಿಕೆ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ರೂ. 321.8 ಲಕ್ಷ ಕೋಟಿಗೆ ತಲುಪಿದ ಷೇರು ಮಾರುಕಟ್ಟೆ ಬಂಡವಾಳ: 8 ಮಿಡ್‌ಕ್ಯಾಪ್‌ಗಳು ಲಾರ್ಜ್‌ಕ್ಯಾಪ್‌ಗಳಾಗಿ ಪರಿವರ್ತನೆ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts