More

    ‘ನಾನು ರೈಲ್ವೆ ಸಚಿವನಲ್ಲ’: ಟಿಟಿಇ ಕೊಟ್ಟ ಉತ್ತರಕ್ಕೆ ಪ್ರಯಾಣ ಕೈಬಿಟ್ಟ ಯುವತಿ!

    ಕಾನ್ಪುರ: ರೈಲುಗಳಲ್ಲಿ ಮಹಿಳೆಯರು ಮತ್ತು ವಿವಿಧ ಶ್ರೇಣಿಯ ಟಿಕೆಟ್​ ಬುಕ್ಕಿಂಗ್​ಗಳನ್ನು ಪರಿಗಣಿಸದೆ ಪ್ರಯಾಣಿಕರು ವರ್ತಿಸುವುದನ್ನು ಕಾಣಬಹುದು. ಅದೇ ರೀತಿ ಇಲ್ಲೊಬ್ಬ ಯುವತಿ ಮಹಿಳೆಯರ ಕೋಚ್​ನಲ್ಲಿ ಕಿಕ್ಕಿರಿದು ತುಂಬಿದ್ದ ಪುರುಷ ಪ್ರಯಾಣಿಕರ ನಡುವೆ ತನ್ನ ಸೀಟ್​ಗೆ ಹೋಗಲು ಸಹಾಯ ಮಾಡುವಂತೆ ಟಿಟಿಇಗೆ ವಿನಂತಿಸಿದರೆ, ಆತ ಕೊಟ್ಟ ಉತ್ತರ ಕೇಳಿ ಆಕೆ ಪ್ರಯಾಣ ರದ್ದು ಮಾಡಬೇಕಾದ ಅನಿವಾರ್ಯತೆ ಎದುರಾಯಿತು.

    ಹೌದು, ರೈಲುಗಳಲ್ಲಿ ಪ್ರಯಾಣ ಸುರಕ್ಷಿತವಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

    ಇದನ್ನೂ ಓದಿ: ಮಗಳ ಶಾಲಾ ಶುಲ್ಕಕ್ಕೆ ಕೂಡಿಟ್ಟ ಹಣ ಕೊಟ್ಟು ಬ್ಲಾಕ್‌ನಲ್ಲಿ ಐಪಿಎಲ್ ಟಿಕೆಟ್ ಖರೀದಿಸಿದ ಧೋನಿ ಅಭಿಮಾನಿ!

    ಇದು ಕಾನ್ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಕೊನೆಗೆ ಯುವತಿ ಮಹಿಳಾ ಕೋಚ್​ನಲ್ಲಿ ಪುರುಷ ಪ್ರಯಾಣಿಕರು ಮಾತ್ರ ತುಂಬಿ ತುಳುಕುತ್ತಿದ್ದರಿಂದ ಅದೇ ರೈಲಿನಲ್ಲಿ ಬೇರೆ ಬೋಗಿಯಲ್ಲಿ ಸೀಟು ಪಡೆಯಲು ಸಹಾಯ ಮಾಡುವಂತೆ ಟಿಟಿಇ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

    ಆದರೆ, ಟಿಟಿಇ ಯುವತಿಗೆ ಸಹಾಯ ಮಾಡುವ ಬದಲು ಕುಂಟು ನೆಪ ನೀಡಿ ನನ್ನ ಕರ್ತವ್ಯ ನಿಭಾಯಿಸಲು ಬಿಡು ಎಂದು ಕೈಮುಗಿದು ಪ್ರಾರ್ಥಿಸುತ್ತಿರುವುದು ಕಂಡು ಬಂದಿದೆ. ಟಿಟಿಇ ಕೈ ಮುಗಿದು ಯುವತಿಗೆ ವ್ಯಂಗ್ಯವಾಗಿ ಹೇಳುತ್ತಾನೆ. “ಈ ವಿಷಯದಲ್ಲಿ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ನಾನು ರೈಲ್ವೆ ಸಚಿವನಲ್ಲದ ಕಾರಣ ಹೆಚ್ಚುವರಿ ರೈಲುಗಳನ್ನು ಓಡಿಸಲು ಸಾಧ್ಯವಿಲ್ಲ.”

    ಭಾರತೀಯ ರೈಲ್ವೆಯ ದುಃಸ್ಥಿತಿಯನ್ನು ವೀಡಿಯೋ ಎತ್ತಿ ತೋರಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಯುವತಿ ಓಖಾ ಟು ಕಾನ್ಪುರ್ ಸೆಂಟ್ರಲ್ ರೈಲಿನಲ್ಲಿ ಸೀಟು ಪಡೆಯಲು ಸಹಾಯ ಮಾಡುವಂತೆ ಟಿಟಿಇ (ಟಿಕೆಟ್ ಕಲೆಕ್ಟರ್) ಬಳಿ ಮನವಿ ಮಾಡುತ್ತಿರುವುದು ಕಂಡುಬರುತ್ತದೆ.

    ರೈಲ್ವೆ ಅಧಿಕಾರಿಗಳು ಕೇವಲ ಅವರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆಯೇ ಹೊರತು ಮಹಿಳೆಯರು ಅಥವಾ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಅಲ್ಲ ಎಂದು ವೀಡಿಯೊದಲ್ಲಿರುವ ಮಹಿಳೆ ಉತ್ತರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸ್ಟಾರ್ ಹೀರೋ ಜೊತೆ ಆರ್​ಆರ್​ಆರ್​ ನಿರ್ಮಾಪಕ ಭಿನ್ನಾಭಿಪ್ರಾಯ… ಆ ದೊಡ್ಡ ಪ್ರಾಜೆಕ್ಟ್ ಗೆ ಬ್ರೇಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts