More

    ಷೇರು ಸೂಚ್ಯಂಕ ಅಲ್ಪ ಏರಿಕೆ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್‌ಗಳಾದ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಮಂಗಳವಾರ ಉತ್ತಮ ಆರಂಭ ಕಂಡರೂ ಮಧ್ಯದಲ್ಲಿ ವಹಿವಾಟು ಕುಸಿತವಾಗಿದ್ದರಿಂದ ಅಂತಿಮವಾಗಿ ಅಲ್ಪ ಲಾಭ ಗಳಿಸಿದವು.

    ದಿನದ ಆರಂಭದಲ್ಲಿ ತೀವ್ರವಾಗಿ ಏರಿದ ನಂತರ, 30-ಷೇರುಗಳ ಬಿಎಸ್​ಇ ಸೂಚ್ಯಂಕವು ಕುಸಿತು ಅಂತಿಮವಾಗಿ 30.99 ಅಂಕಗಳ ಅಥವಾ ಶೇಕಡಾ 0.04ರಷ್ಟು ಏರಿಕೆ ಕಂಡು 71,386.21 ಕ್ಕೆ ತಲುಪಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 680.25 ಅಂಕ ಅಥವಾ ಶೇಕಡಾ 0.95 ರಷ್ಟು ಜಿಗಿದು 72,035.47 ಕ್ಕೆ ತಲುಪಿತ್ತು.

    ನಿಫ್ಟಿ ಕೂಡ 31.85 ಅಂಕಗಳು ಅಥವಾ ಶೇಕಡಾ 0.15 ಏರಿಕೆಯಾಗಿ 21,544.85 ಕ್ಕೆ ತಲುಪಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 211.45 ಅಂಕಗಳು ಅಥವಾ 0.98 ಶೇಕಡಾ ಏರಿಕೆಯಾಗಿ 21,724.45 ಕ್ಕೆ ತಲುಪಿತ್ತು.

    ಲಾರ್ಸೆನ್ ಅಂಡ್ ಟೂಬ್ರೊ, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್, ಟಾಟಾ ಮೋಟಾರ್ಸ್, ಸನ್ ಫಾರ್ಮಾ ಮತ್ತು ಟಾಟಾ ಸ್ಟೀಲ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ನೆಸ್ಲೆ, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಕುಸಿತ ಅನುಭವಿಸಿದವು.

    ಏಷ್ಯದ ಮಾರುಕಟ್ಟೆಗಳಲ್ಲಿ ಟೋಕಿಯೊ ಮತ್ತು ಶಾಂಘೈ ಏರಿಕೆ ಕಂಡರೆ, ಸಿಯೋಲ್ ಮತ್ತು ಹಾಂಗ್ ಕಾಂಗ್ ಕುಸಿತ ದಾಖಲಿಸಿದವು.

    ಐರೋಪ್ಯ ಮಾರುಕಟ್ಟೆಗಳು ಬಹುತೇಕವಾಗಿ ಕಡಿಮೆ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳು ಸೋಮವಾರ ಗಮನಾರ್ಹ ಲಾಭ ಕಂಡವು.

    ಸೋಮವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 670.93 ಅಂಕಗಳಷ್ಟು ಕುಸಿದು 71,355.22 ಕ್ಕೆ ಸ್ಥಿರವಾಗಿತ್ತು. ನಿಫ್ಟಿಯು 197.80 ಅಂಕಗಳಷ್ಟು ಕುಸಿದು 21,513 ಕ್ಕೆ ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 16.03 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಮಾಹಿತಿ ತಿಳಿಸಿದೆ.

    ವಿವಿಧ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​: 37,404.32 (26.37 ಅಂಕ ಏರಿಕೆ)
    ಬಿಎಸ್​ಇ ಸ್ಮಾಲ್​ ಕ್ಯಾಪ್​: 43,821.16 (161.12 ಅಂಕ ಏರಿಕೆ)
    ನಿಫ್ಟಿ ಮಿಡ್​ ಕ್ಯಾಪ್​ 100: 46,969.95 (75.6 ಅಂಕ ಏರಿಕೆ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100: 15,409.70 (67.15 ಅಂಕ ಏರಿಕೆ)
    ನಿಫ್ಟಿ ಸ್ಮಾಲ್​ ಕ್ಯಾಪ್​ 250: 14,350.90 (52.7 ಅಂಕ ಏರಿಕೆ)

    ರೂ. 321.8 ಲಕ್ಷ ಕೋಟಿಗೆ ತಲುಪಿದ ಷೇರು ಮಾರುಕಟ್ಟೆ ಬಂಡವಾಳ: 8 ಮಿಡ್‌ಕ್ಯಾಪ್‌ಗಳು ಲಾರ್ಜ್‌ಕ್ಯಾಪ್‌ಗಳಾಗಿ ಪರಿವರ್ತನೆ ಆಗಿದ್ದೇಕೆ?

    ಲಕ್ಷದ್ವೀಪ ಚಲೋ ಅಭಿಯಾನ: ಒಂದೇ ದಿನದಲ್ಲಿ ಶೇಕಡಾ 20ರಷ್ಟು ಲಾಭ ಕಂಡ ಸ್ಮಾಲ್‌ಕ್ಯಾಪ್ ಯಾವುದು ಗೊತ್ತೆ?

    ನಾಯಿ ಮಾಂಸ ನಿಷೇಧ ಕಾನೂನು ಅಂಗೀಕರಿಸಿದ ದಕ್ಷಿಣ ಕೋರಿಯಾ ಸಂಸತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts