More

    ನಾಯಿ ಮಾಂಸ ನಿಷೇಧ ಕಾನೂನು ಅಂಗೀಕರಿಸಿದ ದಕ್ಷಿಣ ಕೋರಿಯಾ ಸಂಸತ್ತು

    ಸಿಯೋಲ್​: ನಾಯಿ ಮಾಂಸ ಸೇವನೆಯನ್ನು ನಿಷೇಧಿಸುವ ಮಹತ್ವದ ಕಾನೂನಿಗೆ ದಕ್ಷಿಣ ಕೊರಿಯಾದ ಸಂಸತ್ತು ಅನುಮೋದನೆ ನೀಡಿದೆ. ನಾಯಿ ಮಾಂಸ ಸೇವನೆಯ ಶತಮಾನಗಳ ಹಳೆಯ ಅಭ್ಯಾಸವನ್ನು ನಿಷೇಧಿಸುವ ಶಾಸನವನ್ನು ಮಂಗಳವಾರ ದೇಶದ ಸಂಸತ್ತು ಅಂಗೀಕರಿಸಿದೆ.

    ರಾಷ್ಟ್ರೀಯ ಸಂಸತ್ತಿನಲ್ಲಿ ಯಾವುದೇ ವಿರೋಧಿ ಮತಗಳಿಲ್ಲದೆ 208 ಸದಸ್ಯರಿಂದ ಕಾನೂನು ಸರ್ವಾನುಮತದ ಅನುಮೋದನೆಯನ್ನು ಪಡೆಯಿತು. ಸಚಿವ ಸಂಪುಟ ಮತ್ತು ಅಧ್ಯಕ್ಷ ಯೂನ್ ಸುಕ್ ಯೋ ಅವರ ಅಂತಿಮವಾಗಿ ಅನುಮೋದನೆ ನೀಡಿದ ನಂತರ ಔಪಚಾರಿಕ ಕಾನೂನಾಗುವ ನಿರೀಕ್ಷೆಯಿದೆ.

    ಈ ಕಾನೂನಿನ ಪ್ರಕಾರ 2027ರಿಂದ ನಾಯಿ ಹತ್ಯೆ, ಅದರ ಮಾಂಸದ ಸೇವನೆ, ಮಾರಾಟ ನಿಷೇಧಗೊಳ್ಳುತ್ತದೆ. ಈ ಕಾನೂನು ಉಲ್ಲಂಘಿಸುವವರಿಗೆ 2-3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ನಾಯಿಗಳನ್ನು ಕಡಿಯುವಲ್ಲಿ ತಪ್ಪಿತಸ್ಥರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಮಾಂಸಕ್ಕಾಗಿ ನಾಯಿಗಳನ್ನು ಸಾಕುವುದು ಅಥವಾ ಮಾರಾಟ ಮಾಡುವಲ್ಲಿ ತೊಡಗಿರುವವರಿಗೆ ಗರಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಬಹದು. ಈ ಶಾಸನವು ಮೂರು ವರ್ಷಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ. ಇದರಿಂದ ತೊಂದರೆಗೆ ಒಳಗಾಗುವ ರೈತರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಪರ್ಯಾಯ ಜೀವನೋಪಾಯವನ್ನು ಕಂಡುಕೊಳ್ಳಲು ಪರಿವರ್ತನೆಯ ಅವಧಿಯನ್ನು ಇದು ಒದಗಿಸುತ್ತದೆ,

    ದಕ್ಷಿಣ ಕೋರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಮತ್ತು ಅವರ ಪತ್ನಿ ನಾಯಿ ಮಾಂಸವನ್ನು ನಿಷೇಧಿಸುವಂತೆ ಪದೇಪದೆ ಕರೆ ನೀಡಿದ್ದರು. ಈ ನಿಷೇಧವು ಈ ಹಿಂದೆ ದೇಶದಲ್ಲಿ ರೈತರು ಮತ್ತು ಸಣ್ಣ ನಾಯಿ ಮಾಂಸದ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳಿಂದ ಗಮನಾರ್ಹ ಪ್ರತಿರೋಧವನ್ನು ಎದುರಿಸಿತ್ತು.

    ಕಳೆದ ವರ್ಷ ನವೆಂಬರ್‌ನಲ್ಲಿ, ಸುಮಾರು 200 ದಕ್ಷಿಣ ಕೊರಿಯಾದ ರೈತರು ಸಿಯೋಲ್‌ನಲ್ಲಿ ಪ್ರತಿಭಟಿಸಿದರು, ಮಾನವ ಬಳಕೆಗಾಗಿ ನಾಯಿ ಸಾಕಣೆಯನ್ನು ನಿಷೇಧಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿದ್ದರು.

    ಮಾಲ್ಡೀವ್ಸ್ ಅಧ್ಯಕ್ಷರ ವಜಾಕ್ಕೆ ಸಂಸದ ಆಗ್ರಹ: ಭಾರತ ವಿರುದ್ಧದ ಹೇಳಿಕೆಗಳಿಗೆ ಹಲವು ನಾಯಕರಿಂದ ಖಂಡನೆ

    “ಸುಂದರ ಲಕ್ಷದ್ವೀಪಕ್ಕೆ ಭೇಟಿ ನೀಡಿ”: ವಿರಾಮಕ್ಕೆ ಸಲಹೆ ನೀಡುವ ದೆಹಲಿ ಪೊಲೀಸರ ಪೋಸ್ಟ್ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts