More

    ಮಾಲ್ಡೀವ್ಸ್ ಅಧ್ಯಕ್ಷರ ವಜಾಕ್ಕೆ ಸಂಸದ ಆಗ್ರಹ: ಭಾರತ ವಿರುದ್ಧದ ಹೇಳಿಕೆಗಳಿಗೆ ಹಲವು ನಾಯಕರಿಂದ ಖಂಡನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಟೀಕಿಸುವ ಹೇಳಿಕೆಗಳ ಹಿನ್ನೆಲೆಯಲ್ಲಿ ಮೊಹಮ್ಮದ್ ಮುಯಿಜ್ಜು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಾಲ್ಡೀವ್ಸ್ ಸಂಸದ ಅಲಿ ಅಜೀಮ್ ಆಗ್ರಹಿಸಿದ್ದಾರೆ. ಇನ್ನೊಬ್ಬ ಸಂಸದ ಮೀಕೈಲ್ ನಸೀಮ್ ಅವರು, ವಿದೇಶಾಂಗ ಸಚಿವ ಮೂಸಾ ಝಮೀರ್ ಅವರನ್ನು ಪ್ರಶ್ನಿಸುವಂತೆ ಸಂಸತ್ತಿಗೆ ಕೇಳಿಕೊಂಡಿದ್ದಾರೆ.

    ಡೆಮಾಕ್ರಾಟ್‌ ಸದಸ್ಯರಾದ ಅಜೀಮ್ ಅವರು, ಅಧ್ಯಕ್ಷ ಮುಯಿಝು ಅವರನ್ನು ಅಧಿಕಾರದಿಂದ ತೆಗೆದುಹಾಕಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅತಿದೊಡ್ಡ ವಿರೋಧ ಪಕ್ಷ ಎಂಡಿಪಿಯು ಅವಿಶ್ವಾಸ ಮತ ಪ್ರಸ್ತಾಪ ಮಂಡಿಸಬೇಕೆಂದು ಅವರು ಕೇಳಿದ್ದಾರೆ.

    ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ನಿಷ್ಕ್ರಿಯತೆಯನ್ನು ಅನುಸರಿಸಿದ ವಿದೇಶಾಂಗ ಸಚಿವರನ್ನು ಸಂಸತ್ತಿಗೆ ಕರೆಸುವಂತೆ ನಸೀಮ್​ ಒತ್ತಾಯಿಸಿದ್ದಾರೆ.

    ಈ ವರ್ಷ ಸಾರ್ವತ್ರಿಕ ಚುನಾವಣೆಗೆ ಮುಂಚಿನಿಂದಲೂ ವಿರೋಧ ಪಕ್ಷದ ಸಂಸದರು ಮಾಲ್ಡೀವ್ಸ್​ ಅಧ್ಯಕ್ಷ ಮುಯಿಝು ಮೇಲೆ ವಾಗ್ದಾಳಿ ನಡೆಸಿದ್ದಾರೆ. ಎಂಡಿಪಿ ನಾಯಕಿ ಮತ್ತು ಮಾಜಿ ರಕ್ಷಣಾ ಸಚಿವೆ ಮರಿಯಾ ಅಹ್ಮದ್ ದೀದಿ ಅವರು ಹಳೆಯ ಸಂಬಂಧವನ್ನು ದೂರವಿಡುವ ಆಡಳಿತ ಪಕ್ಷದ ದೃಷ್ಟಿಕೋನವನ್ನು ಟೀಕಿಸಿದ್ದಾರೆ. ನಾವು ಯಾವಾಗಲೂ ಭಾರತ ಮೊದಲು ಎಂಬ ನೀತಿಯನ್ನು ಹೊಂದಿದ್ದೇವು ಎಂದು ಅವರು ತಿಳಿಸಿದ್ದಾರೆ.

    ಇನ್ನೊಬ್ಬ ಎಂಡಿಪಿ ನಾಯಕ ಹಾಗೂ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಅಹ್ಮದ್ ಮಹ್ಲೂಫ್ ಅವರು ಭಾರತೀಯ ಪ್ರವಾಸಿಗರು ನಮ್ಮ ದೇಶವನ್ನು ಬಹಿಷ್ಕರಿಸುವ ಪ್ರವೃತ್ತಿಯು ಮುಂದುವರಿದರೆ ಮಾಲ್ಡೀವ್​ ಆರ್ಥಿಕತೆಯ ಮೇಲೆ “ದೊಡ್ಡ ಪರಿಣಾಮ” ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
    “ನಾನು ತೀವ್ರವಾಗಿ ಚಿಂತಿತನಾಗಿದ್ದೇನೆ … ಚೇತರಿಸಿಕೊಳ್ಳಲು ಕಷ್ಟವಾಗುತ್ತದೆ” ಎಂದೂ ಅವರು ಹೇಳಿದ್ದಾರೆ.

    ಏತನ್ಮಧ್ಯೆ, ಮಾಜಿ ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಮೌಸೂಮ್, ಮಾಲ್ಡೀವ್ಸ್ ಪ್ರವಾಸೋದ್ಯಮ ಅವಲಂಬಿತವಾಗಿದೆ. ಭಾರತೀಯ ಪ್ರವಾಸಿಗರು ಇದರ ಪ್ರಮುಖ ಆದಾಯ ಮೂಲವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

    ಮತ್ತಿಬ್ಬರು ಹಿರಿಯ ರಾಜಕಾರಣಿಗಳಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಮತ್ತು ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಕೂಡ ಮೋದಿ ವಿರುದ್ಧದ ಹೇಳಿಕೆಗಳನ್ನು ಟೀಕಿಸಿದ್ದಾರೆ.

    ಅಧ್ಯಕ್ಷ ಮುಯಿಝು ಅವರ ಸರ್ಕಾರವು ಮೋದಿ ವಿರುದ್ಧದ ಹೇಳಿಕೆಗಳನ್ನು “ಸ್ವೀಕಾರಾರ್ಹವಲ್ಲ” ಎಂದು ಹೇಳಿದೆ. ಅಲ್ಲದೆ, ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಎಕ್ಸ್ ಪೋಸ್ಟ್​ನಲ್ಲಿ “ನಮ್ಮ ಎಲ್ಲಾ ಪಾಲುದಾರರೊಂದಿಗೆ, ವಿಶೇಷವಾಗಿ ನಮ್ಮ ನೆರೆಹೊರೆಯವರೊಂದಿಗೆ ರಚನಾತ್ಮಕ ಸಂವಾದವನ್ನು ಬೆಳೆಸಲು ಬದ್ಧವಾಗಿದೆ…” ಎಂದಿದ್ದಾರೆ.

    ಪ್ರಧಾನಿ ಮೋದಿ ಅವರು ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿದೆ. ಟ್ವಿಟರ್‌ನಲ್ಲಿ #BoycottMaldives ಟ್ರೆಂಡ್ ಮುಂದುವರಿದಿದೆ. ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts