More

    “ಸುಂದರ ಲಕ್ಷದ್ವೀಪಕ್ಕೆ ಭೇಟಿ ನೀಡಿ”: ವಿರಾಮಕ್ಕೆ ಸಲಹೆ ನೀಡುವ ದೆಹಲಿ ಪೊಲೀಸರ ಪೋಸ್ಟ್ ವೈರಲ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗಳ ವಿವಾದದ ನಂತರ ವಿವಿಧ ಭಾರತೀಯ ಸೆಲೆಬ್ರಿಟಿಗಳು ಲಕ್ಷದ್ವೀಪ ಸೇರಿ ಸ್ಥಳೀಯ ಬೀಚ್‌ಗಳು ಮತ್ತು ಟ್ರಾವೆಲ್ ಸ್ಪಾಟ್‌ಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈಗ ದೆಹಲಿ ಪೊಲೀಸರು ಕೂಡ ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಬೆಂಬಲ ವ್ಯಕ್ತಪಡಿಸುವ ಮೂಲಕ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಉತ್ತೇಜನವನ್ನು ಪ್ರತಿಪಾದಿಸಿದ್ದಾರೆ.

    “ನಮ್ಮ ದ್ವೀಪವು ಸುಂದರ ಮತ್ತು ಆಕರ್ಷಕವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಲಕ್ಷದ್ವೀಪ ಚಿತ್ರವನ್ನು ಹಂಚಿಕೊಂಡ ದೆಹಲಿ ಪೊಲೀಸರು, “ಒತ್ತಡದಿಂದ ವಾಹನ ಚಲಾಯಿಸಬೇಡಿ. ಸರಿಯಾಗಿ ನಿದ್ದೆ ಮಾಡಿ. ವಿರಾಮ ತೆಗೆದುಕೊಳ್ಳಿ. ಸುಂದರ ಲಕ್ಷದ್ವೀಪಕ್ಕೆ ಭೇಟಿ ನೀಡಿ” ಎಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/C13cvj3y5Y7/

    ಈ ಪೋಸ್ಟ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಪ್ರಿಯತೆ ಗಳಿಸಿದೆ, ಹಲವಾರು ಬಳಕೆದಾರರಿಂದ ಲೈಕ್​ ಮತ್ತು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

    “ಮತ್ತೊಮ್ಮೆ, ದೆಹಲಿ ಪೊಲೀಸರಿಂದ ಮೆಚ್ಚುಗೆ ಪಡೆದ ಪೋಸ್ಟ್ ಬಂದಿದೆ, ಕೆಲವು ಕಲಿಕೆಯೊಂದಿಗೆ ಆಸಕ್ತಿದಾಯಕ ಪೋಸ್ಟ್‌ಗಳನ್ನು ರಚಿಸುವುದಕ್ಕಾಗಿ ಈ ಪುಟದ ಹಿಂದಿನ ತಂಡಕ್ಕೆ ಹ್ಯಾಟ್ಸ್ ಆಫ್” ಎಂದು ಇಂಟರ್​ನೆಟ್​ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

    “ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ಧನ್ಯವಾದಗಳು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts