More

    ರಾಮನವಮಿ ಸಂಭ್ರಮ: ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

    ಬೆಂಗಳೂರು: ರಾಮ ನವಮಿ ಆಚರಣೆ ಹಿನ್ನೆಲೆ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

    ರಾಮ ನವಮಿಯ ಕಾರಣ ನಗರದಲ್ಲಿ ಬುಧವಾರ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಸಾಮಾನ್ಯವಾಗಿ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರತಿ ಬಾರಯೂ ಬಿಬಿಎಂಪಿ ಈ ಕ್ರಮ ಕೈಗೊಳ್ಳುತ್ತದೆ.ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ.

    ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮ ನವಮಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನಾಂಕದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಜನಿಸಿದ ದಿನ ಇದಾಗಿದೆ. ಈ ವರ್ಷ ಏಪ್ರಿಲ್ 17ರಂದು ನಡೆಯಲಿದೆ. ಈ ಪ್ರಯುಕ್ತ ಬೆಂಗಳೂರು ನಗರದಾದ್ಯಂತ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

    VIDEO | ನೀರಿನಲ್ಲಿ ತೇಲುತ್ತಿರುವ ಎರಡಂತಸ್ತಿನ ಮನೆ; ಅರೆ ಇದು ಎಲ್ಲಿಂದ ಬಂತು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts