

ಮೈಸೂರು: ಪರಮಹಂಸ ಯೋಗ ಮಹಾವಿದ್ಯಾಲಯ, ಇಂಟರ್‌ನ್ಯಾಷನಲ್ ಯೋಗ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಜು.27ರಂದು ನಂಜು ಮಳಿಗೆ ಹತ್ತಿರದ ಶಿವಾನಂದ ಜ್ಞಾನಾಲಯದಲ್ಲಿ ಬೆಳಗ್ಗೆ 10ಕ್ಕೆ ಕುಂಡಲಿನಿ ಶಕ್ತಿಯ ಜಾಗೃತಿಯಿಂದ ಆತ್ಮದ ಬೆಳಕು ಕಾಣುವ ದಿವ್ಯೋಪಾಸನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯೋಗ ಮಹಾ ವಿದ್ಯಾಲಯದ ಅಧ್ಯಕ್ಷ ಯೋಗ ಪ್ರವೀಣ ಶಿವಪ್ರಕಾಶ್ ತಿಳಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಡಾ.ಎಸ್.ಪಿ. ಯೋಗಣ್ಣ ಇನ್ನಿತರರು ಹಾಜರಿರುವರು. ಇದು ಎಲ್ಲರಿಗೂ ಪ್ರವೇಶ ಇರುವ ಉಚಿತ ಕಾರ್ಯಕ್ರಮವಾಗಿದೆ. ಕುಂಡಲಿನಿ ಶಕ್ತಿ ಕುರಿತು ಸದ್ಗುರು ಶ್ರೀರಾಮಜೀ ಅವರು ಸರಳ, ಸ್ಪಷ್ಟ ಹಾಗೂ ಜೀವನದ ಉದಾಹರೆಗಳ ಮೂಲಕ ಉಪನ್ಯಾಸ ನೀಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.