ಭಾರತದ ಮೇಲೆ ಪ್ರತೀಕಾರ ಕೈಗೊಳ್ಳಲು ಬಾಲ್​ಕೋಟ್​ನಲ್ಲಿ 27 ಮಂದಿ ಉಗ್ರರಿಗೆ ತರಬೇತಿ

balkote feb 07 2020
Published on

ನವದೆಹಲಿ: ರಾಷ್ಟ್ರದ ಮೇಲೆ ದಾಳಿ ನಡೆಸಲು ಜೈಷ್–ಎ–ಮೊಹಮದ್ ಉಗ್ರ ಸಂಘಟನೆ ಬಾಲ್​ಕೋಟ್​ನಲ್ಲಿ 27 ಮಂದಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ರಾಷ್ಟ್ರದ ವಾಯು ಸೇನೆ ಕಳೆದ ಫೆಬ್ರವರಿಯಲ್ಲಿ ಪಾಕ್​ ಮೇಲೆ ನಡೆಸಿದ ವಾಯು ದಾಳಿಗೆ ಪ್ರತೀಕಾರ ಕೈಗೊಳ್ಳಲು ಬಾಲಕೋಟ್​ನ ಶಿಬಿರದಲ್ಲಿ ತರಬೇತಿ ನೀಡುತ್ತಿದೆ. ಈ ಉಗ್ರರನ್ನು ಭಾರತದ ಮೇಲೆ ದಾಳಿ ನಡೆಸಲು ಬಳಸಿಕೊಳ್ಳಲಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಭಾರತದ ವಿರುದ್ಧದ ಮುಂದಿನ ದಾಳಿಯ ನೇತೃತ್ವವನ್ನು ಉಗ್ರ ಮೌಲಾನಾ ಮಸೂದ್ ಅಜರ್ ರಕ್ತಸಂಬಂಧಿ ಯೂಸುಫ್ ಅಜರ್ ವಹಿಸಿದ್ದಾನೆ ಎಂಬ ಮಾಹಿತಿ ಪತ್ತೆಯಾಗಿದೆ.

ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ 27 ಮಂದಿ ಉಗ್ರರಲ್ಲಿ ಎಂಟು ಮಂದಿ ಪಾಕ್​ ಆಕ್ರಮಿತ ಕಾಶ್ಮೀರದವರು. ಇವರಿಗೆ ಪಾಕ್​ನ ಪಂಜಾಬ್​ ಹಾಗೂ ಅಫ್ಘಾನಿಸ್ತಾನದ ಮೂವರು ತರಬೇತಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net