

ಭೋಪಾಲ್: ಮಧ್ಯಪ್ರದೇಶದ ಪರ್ವಲಿಯಾದಲ್ಲಿ ಅನುಮತಿಯಿಲ್ಲದೆ ನಡೆಸಲಾಗುತ್ತಿದ್ದ ಬಾಲಕಿಯರ ಹಾಸ್ಟೆಲ್ನಿಂದ 26 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಿಎಂ ಶಿವರಾಜ್ ಸಿಂಗ ಚೌಹಾಣ್ ಒತ್ತಾಯಿಸಿದ್ದಾರೆ.
ಭೋಪಾಲ್ನಿಂದ 20 ಕಿಮೀ ದೂರದಲ್ಲಿರುವ ಆಂಚಲ್ ಬಾಲಕಿಯರ ಹಾಸ್ಟೆಲ್ಗೆ ಮಕ್ಕಳ ರಣಾ ಆಯೋಗದ ತಂಡವು ಹೋದಾಗ, ಈ ಹಾಸ್ಟೆಲ್ನಲ್ಲಿ ಒಟ್ಟು 68 ಹುಡುಗಿಯರು ವಾಸಿಸುತ್ತಿದ್ದಾರೆ ಎಂದು ನೋಂದಾಯಿಸಲಾಗಿದೆ. ಆದರೆ ತಪಾಸಣೆಯ ಸಮಯದಲ್ಲಿ ಕೇವಲ 41 ಹುಡುಗಿಯರು ಮಾತ್ರ ಪತ್ತೆಯಾಗಿದ್ದಾರೆ. 26 ಹುಡುಗಿಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಗುಜರಾತ್, ಜಾರ್ಖಂಡ್, ರಾಜಸ್ಥಾನ ಹೊರತುಪಡಿಸಿ, ಸೆಹೋರ್, ರೈಸನ್, ಛಿಂದ್ವಾರಾ, ಬಾಲಾಘಾಟ್ ಮತ್ತು ವಿದಿಶಾದ ಹುಡುಗಿಯರು ಎನ್ನಲಾಗಿದೆ. 4 ರಿಂದ 5 ವರ್ಷಗಳಿಂದ ಇಲ್ಲಿ ಬಾಲಕಿಯರು ಇದ್ದಾರೆ. ಕೆಲವೊಮ್ಮೆ ಹುಡುಗಿಯರನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗುತ್ತಿದ್ದರು. ತಡರಾತ್ರಿ ಹಾಸ್ಟೆಲ್ಗೆ ವಾಹನಗಳು ಬರುತ್ತಿದ್ದವು ಎಂದು ಸ್ಥಳೀಯರಾದ ಪವನ್ ಹೇಳಿದ್ದಾರೆ.
ಹುಡುಗಿಯರಿಗೆ ಬಲವಂತವಾಗಿ ಕ್ರಿಶ್ಚಿಯನ್ ಆಚರಣೆ ಅಭ್ಯಾಸ ಮಾಡಿಸಲಾಗುತಿತ್ತು ಎಂದು ಸುತ್ತಮುತ್ತಲಿನ ಜನರು ಆರೋಪಿಸಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಣಾ ಆಯೋಗದ ಅಧ್ಯ ಪ್ರಿಯಾಂಕ್ ಕಾನೂಂಗೊ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ ವೀರ ರಾಣಾ ಅವರಿಗೆ ಪತ್ರ ಬರೆದಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಕೋರಿದ್ದಾರೆ.