ಗಾಜಾ ನೆರವು ಹಂಚಿಕೆ ವೇಳೆ ಇಸ್ರೇಲ್ ದಾಳಿ! 26 ಸಾವು, 150ಕ್ಕೂ ಹೆಚ್ಚು ಮಂದಿ ಗಂಭೀರ | Israeli Tank Fire

ವಿಜಯವಾಣಿ - 2025-06-01T152527.406
Published on

Cairo: ಇಂದು (ಜೂ.01) ಮುಂಜಾನೆ ದಕ್ಷಿಣ ಗಾಜಾದಲ್ಲಿ ಅಮೆರಿಕ ಬೆಂಬಲಿತ ನೆರವು ವಿತರಣಾ ಕೇಂದ್ರದ ಮೇಲೆ ಇಸ್ರೇಲ್ ಗುಂಡಿನ ದಾಳಿ ( Israeli Tank Fire ) ನಡೆಸಿದ ಹಿನ್ನೆಲೆ ಕನಿಷ್ಠ 26 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಮಾಧ್ಯಮ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಇಸ್ರೇಲಿ ಟ್ಯಾಂಕರ್​ಗಳು ಗುಂಡಿನ ದಾಳಿ ನಡೆಸಿದ ಹಿನ್ನಲೆ 26 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರು ಮತ್ತು ಗಾಯಾಳುಗಳನ್ನು ರೆಡ್​ ಕ್ರಾಸ್​ ಫೀಲ್ಡ್​ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರನ್ನು ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ನಾಗರಿಕ ರಕ್ಷಣಾ ವಕ್ತಾರ ಮಹ್ಮದ್ ಬಸ್ಸಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಬಂಡಿ ಗಾಡಿಗಳಲ್ಲಿ ಮತ್ತು ಲಾರಿಗಳ ಹಿಂಭಾಗದಲ್ಲಿ ಮೃತದೇಹಗಳನ್ನು ನಾಸರ್ ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯಗಳು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ಲಭಿಸಿವೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net