76 ವರ್ಷದ ವೃದ್ಧನ ಪ್ರೀತಿಯಲ್ಲಿ ಬಿದ್ದ 25 ವರ್ಷದ ಯುವತಿ! ಶೀಘ್ರದಲ್ಲೇ ಇಬ್ಬರಿಗೂ ಮದುವೆ...love

woman falls in love
Published on

ಅಮೆರಿಕ: ( love ) ಪ್ರೀತಿ ವಯಸ್ಸಿನ ಎಲ್ಲಾ ಮಿತಿಗಳನ್ನು ಮೀರಿದೆ. ಅಮೆರಿಕದ ಸ್ಯಾನ್ ಡಿಯಾಗೋದ 25 ವರ್ಷದ ಡಯಾನಾ ಮೊಂಟಾನೊ ಅವರು 76 ವರ್ಷದ ಎಡ್ಗರ್ ಅವರನ್ನು ಪ್ರೀತಿಸಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜುಲೈ 2023 ರಲ್ಲಿ, ಡಯಾನಾಗೆ 23 ವರ್ಷ ವಯಸ್ಸಾಗಿದ್ದಾಗ, ಎಡ್ಗರ್ ಅವಳ ಫೋನ್ ಸಂಖ್ಯೆಯನ್ನು ಕೇಳಿದನು. ವಯಸ್ಸಿನ ಅಂತರದಿಂದಾಗಿ ಮೊದಲು ಅವಳು ಹಿಂಜರಿದಳು, ಆದರೆ ನಂತರ ಅವಳು ಅವನಿಗೆ ತನ್ನ ಸಂಖ್ಯೆಯನ್ನು ಕೊಟ್ಟಳು. ಮೊದಲ ಭೇಟಿಯಲ್ಲೇ ಎಡ್ಗರ್ ತನ್ನನ್ನು ಪ್ರೀತಿಸುತ್ತಿದ್ದಳು ಎಂದು ಡಯಾನಾಗೆ ಗೊತ್ತಾಗಿತ್ತು. ಕೆಲವು ತಿಂಗಳು ಇಬ್ಬರು ಫೋನ್​​ ಮೂಲಕವಾಗಿ ಸಂಪರ್ಕ ಹೊಂದಿದ್ದರು, ಚಾಟ್​​ ಹಾಗೂ ಕಾಲ್​​ ಮಾಡುತ್ತಾ ಎಡ್ಗರ್ ಬಗ್ಗೆ ಅವಳ ಭಾವನೆಗಳು ಸಹ ಹುಟ್ಟಿಕೊಂಡವು.

ನಂತರ ಸುಮಾರು ಒಂದು ವರ್ಷ ಡೇಟಿಂಗ್ ಮಾಡಿದ ನಂತರ, ಇಬ್ಬರೂ ಹವಾಯಿಗೆ ಪ್ರಣಯ ಪ್ರವಾಸಕ್ಕೆ ಹೋದರು. ಎಡ್ಗರ್ ಅಲ್ಲಿ ಡಯಾನಾಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದನು. ಅವನು ಹೇಳಿದನು, "ನಾನು ಚಿಕ್ಕವನಾಗಿದ್ದರೆ, ನಾನು ನಿನ್ನನ್ನು ಮದುವೆಯಾಗುತ್ತಿದ್ದೆ." ಇದಕ್ಕೆ ಡಯಾನಾ ಕೂಡ ತಕ್ಷಣ ಉತ್ತರಿಸಿದಳು, "ನಾನು ಸಿದ್ಧ." ಎಂದು ಹೇಳುವ ಮೂಲಕವಾಗಿ ಇಬ್ಬರು ಪ್ರೀತಿಯಲ್ಲಿ ಬಿದ್ದರು.

ವೃತ್ತಿಯಲ್ಲಿ ನರ್ಸ್ ಆಗಿರುವ ಡಯಾನಾ ಅವರ ಕುಟುಂಬ ಈ ಸಂಬಂಧವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. 25 ವರ್ಷದ ಡಯಾನಾ ಮೊಂಟಾನೊ ಹಾಗೂ 76 ವರ್ಷದ ಎಡ್ಗರ್ ಅವರು ತನಗಿಂತ 51 ವರ್ಷ ದೊಡ್ಡವರು, ಅಂದರೆ ಅವರ ಅಜ್ಜನ ವಯಸ್ಸು. ಕುಟುಂಬ ಸದಸ್ಯರು ಈ ಸಂಬಂಧವನ್ನು ಬಲವಾಗಿ ವಿರೋಧಿಸುತ್ತಾರೆ, ಆದರೆ ಡಯಾನಾ ತಾನು ಎಡ್ಗರ್ ಅವರನ್ನು ಮದುವೆಯಾಗುತ್ತೇನೆ. ತಮ್ಮ ಸಂಬಂಧವನ್ನು ತುಂಬಾ ಭಾವೋದ್ರಿಕ್ತ, ಸಂತೋಷದಿಂದ ತುಂಬಿದ ಮತ್ತು ಸ್ಥಿರವೆಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net