

ಬೆಂಗಳೂರು: ಯಶವಂತಪುರದ ಜೆಟ್‌ಲ್ಯಾಗ್ ಪಬ್‌ನಲ್ಲಿ ‘ಕಾಟೇರ’ ಚಿತ್ರ ತಂಡವು ಅವಧಿ ಮೀರಿ ಪಾರ್ಟಿ ನಡೆಸಿದ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ೨೫ ದಿನಗಳ ಕಾಲ ಪಬ್‌ನ ಬಾರ್ ಲೈಸನ್ಸ್ ಅಮಾನತು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
‘ಕಾಟೇರ’ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ನಟರಾದ ದರ್ಶನ್, ನಿನಾಸಂ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಒರಾಯನ್ ಮಾಲ್ ಬಳಿಯ ಜೆಟ್‌ಲ್ಯಾಗ್ ಪಬ್‌ನಲ್ಲಿ ಜ.೩ರಂದು ನಿಯಮ ಉಲ್ಲಂಸಿ ಬೆಳಗಿನ ಜಾವದವರೆಗೆ ಪಾರ್ಟಿ ಮಾಡಿದ್ದರು. ಈ ಸಂಬಂಧ ಸುಬ್ರಮಣ್ಯನಗರ ಠಾಣೆ ಪೊಲೀಸರು ಪಬ್‌ನ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ ಮತ್ತು ಅಬಕಾರಿ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಜೆಟ್‌ಲ್ಯಾಗ್ ಪಬ್, ಅಬಕಾರಿ ನಿಯಮ ಉಲ್ಲಂಸಿದ ಸಂಗತಿಯನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು.
ಸಾಮಾನ್ಯವಾಗಿ ಮೂರು ಬಾರಿ ಅಬಕಾರಿ ನಿಯಮ ಉಲ್ಲಂಸಿದರೆ ಲೈಸನ್ಸ್ ರದ್ದುಪಡಿಸಲಾಗುತ್ತದೆ. ಅಬಕಾರಿ ಕಾಯಿದೆ ಉಲ್ಲಂಘನೆ ಸಂಬಂಧ ಜೆಟ್‌ಲ್ಯಾಗ್ ಪಬ್ ವಿರುದ್ಧ ಇದೇ ಮೊದಲ ಬಾರಿಗೆ ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿಯು ಪಬ್‌ನ ಲೈಸನ್ಸ್ ಅಮಾನತು ಮಾಡಿ ೨೫ ದಿನಗಳ ಮದ್ಯದ ವಹಿವಾಟು ನಡೆಸದಂತೆ ಆದೇಶಿಸಿದ್ದಾರೆ.
ನಟರ ವಿಚಾರಣೆ ನಡೆದಿತ್ತು:
ಜ.೩ರಂದು ಕಾಟೇರ ಸಿನಿಮಾ ಸಕ್ಸಸ್ ಸಂಭ್ರಮಿಸಲು, ಶಶಿರೇಖಾ ಜಗದೀಶ್ ಮಾಲೀಕತ್ವದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆದರೆ, ತಡರಾತ್ರಿ ೧ ಗಂಟೆವರೆಗೆ ಮಾತ್ರ ಪಬ್ ತೆರೆಯಲು ಸರ್ಕಾರ ಆದೇಶವಿದೆ. ಆದರೆ, ಡಿ.೪ರ ನಸುಕಿನ ೩.೩೦ರವರೆಗೆ ಎಲ್ಲ ಸ್ಟಾರ್ ನಟರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ಪಬ್‌ನ ಮಾಲೀಕರು ನಟರಿಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಅದಕ್ಕೂ ಮೊದಲು ತಡರಾತ್ರಿ ೧೨.೪೫ರ ಸುಮಾರಿಗೆ ಗಸ್ತು ಪೊಲೀಸರು ೧ ಗಂಟೆಗೆ ಪಬ್ ಮುಚ್ಚುವಂತೆ ಸೂಚಿಸಿದ್ದರು. ಆದರೂ ನಸುಕಿನ ಜಾವ ೩.೩೦ ವರೆಗೂ ಪಬ್‌ನಲ್ಲಿ ಸೇವೆ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಅಬಕಾರಿ ಕಾಯ್ದೆ ಅಡಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ತನಿಖೆ ವೇಳೆ ಪಬ್ ಮ್ಯಾನೇಜರ್, ಪಬ್‌ನ ಸಿಬ್ಬಂದಿ ವಿಚಾರಣೆ ನಡೆಸಿ ಹಾಗೂ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ನಟ ದರ್ಶನ್ ಸೇರಿ ಎಂಟು ಮಂದಿ ಸ್ಟಾರ್‌ಗಳು ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ 8 ಮಂದಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ್ದರಿಂದ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿ ಹಲವು ನಟರು ಸುಬ್ರಮಣ್ಯನಗರ ಠಾಣೆಗೆ ಆಗಮಿಸಿ ವಿಚಾರಣೆ ಎದುರಿಸಿ ಹೋಗಿದ್ದರು.
ಜೆಟ್‌ಲ್ಯಾಗ್ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ನೀಡಿದ ಹಾಗೂ ಅಬಕಾರಿ ನಿಯಮ ಉಲ್ಲಂಸಿದ ಸಂಬಂಧ ಅಬಕಾರಿ ಇಲಾಖೆ ಉಪ ಆಯುಕ್ತರು ವರದಿ ನೀಡಿದ್ದರು.ಈ ವರದಿ ಆಧರಿಸಿ ೨೫ ದಿನಗಳ ಕಾಲ ಜೆಟ್‌ಲ್ಯಾಗ್ ಪಬ್‌ನ ಲೈಸನ್ಸ್ ಅಮಾನತು ಮಾಡಲಾಗಿದೆ. ಕೆ.ಎ.ದಯಾನಂದ, ಜಿಲ್ಲಾಧಿಕಾರಿ