ಆರ್ಯನ್ ಖಾನ್ ಪ್ರಕರಣದಲ್ಲಿ 25 ಕೋಟಿ ರೂ.ಗೆ ಬೇಡಿಕೆ.. ಸಮೀರ್ ವಾಂಖೆಡೆ ವಿರುದ್ಧ ಇಡಿ ಕೇಸ್

vankhede
Published on

ಮುಂಬೈ: ಎನ್‌ಸಿಬಿಯ ಮುಂಬೈ ವಿಭಾಗದ ಮಾಜಿ ಝೋನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕೋಟ್ಯಂತರ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್​ ಖಾನ್​ ನನ್ನು ಆರೋಪಿಯನ್ನಾಗಿ ಮಾಡುವುದನ್ನು ತಪ್ಪಿಸಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಎನ್‌ಸಿಬಿ ಮುಂಬೈ ವಿಭಾಗದ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಸಮೀರ್ ವಿರುದ್ಧ ಸಿಬಿಐ ಈಗಾಗಲೇ ಒಂದು ಡ್ರಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದು ತಿಳಿದ ಸಂಗತಿಯೇ. ಸಮೀರ್ ಎನ್‌ಸಿಬಿ ಮುಂಬೈನ ವಲಯ ನಿರ್ದೇಶಕರಾಗಿದ್ದಾಗ ಡ್ರಗ್ ಗ್ಯಾಂಗ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್ಯನ್​ನನ್ನು ಅಕ್ಟೋಬರ್ 2021 ರಲ್ಲಿ ಬಂಧಿಸಲಾಯಿತು. ಆದರೆ ಈ ಪ್ರಕರಣದಲ್ಲಿ ಎನ್‌ಸಿಬಿ ಆರ್ಯನ್‌ಗೆ ಕ್ಲೀನ್‌ಚೆಟ್ ನೀಡಿತು. ಆ ನಂತರ ಸಮೀರ್ ವಿರುದ್ಧ ಹಲವು ಆರೋಪಗಳು ಬಂದಿದ್ದು, ವಲಯ ನಿರ್ದೇಶಕರ ಹುದ್ದೆಯಿಂದ ವರ್ಗಾವಣೆ ಮಾಡಿ ತನಿಖೆ ಆರಂಭಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net