'ಅಟಲ್​ ಸೇತುವೆ ಮೇಲೆ ಮುಸ್ಸಂಜೇಲಿ ಮತ್ತೊಮ್ಮೆ ಪ್ರಯಾಣಿಸಬೇಕೆನಿಸ್ತಿದೆ': ಆನಂದ್ ಮಹೀಂದ್ರಾ

atal bridge
Published on

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಅಟಲ್ ಸೇತುವೆ ಮೇಲೆ ಪ್ರಯಾಣಿಸುವ ಆಸೆ ಈಡೇರಿದೆ ಎಂದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

ಅವರು ಅಟಲ್ ಸೇತುವೆ ಮೇಲೆ ತಮ್ಮ ಕಾರ್​ನಲ್ಲಿ ಸಂಚರಿಸಿದ ಜರ್ನಿಯ ಅನುಭವ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ಪ್ರಧಾನಿ ಉದ್ಘಾಟಿಸಿದ ಅಟಲ್ ಸೇತುವಿನ ಮೇಲೆ ಪ್ರಯಾಣಿಸಬೇಕೆಂಬ ಆಸೆ ಆನಂದ್ ಮಹೀಂದ್ರಾ ಅವರಿಗೆ ಇತ್ತಂತೆ. ಈ ಐಕಾನಿಕ್ ಸೇತುವೆಯ ಮೇಲಿನ ಪ್ರಯಾಣ ಒಂದು ಅದ್ಭುತ ಅನುಭವ ನೀಡಿದೆ ಎಂದು ಬರೆದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಜನವರಿ 12 ರಂದು ಪ್ರಧಾನಿ ಮೋದಿ ಅವರು ದೇಶದ ಅತಿದೊಡ್ಡ ಸಮುದ್ರ ಸೇತುವೆ ಅಟಲ್ ಸೇತುವನ್ನು ಉದ್ಘಾಟಿಸಿದರು, ಇದನ್ನು ದೇಶದ ಎಂಜಿನಿಯರಿಂಗ್ ಅದ್ಭುತ ಎಂದು ಕರೆಯಲಾಗುತ್ತದೆ.

ಆನಂದ್ ಮಹೀಂದ್ರಾ ಸೇತುವೆಯ ಮೇಲಿನ ಪ್ರಯಾಣವನ್ನು ಹೋವರ್‌ಕ್ರಾಫ್ಟ್‌ನಲ್ಲಿ "ನೀರಿನ ಮೇಲೆ ಗ್ಲೈಡಿಂಗ್" ಗೆ ಹೋಲಿಸಿದ್ದಾರೆ. ಪುಣೆಗೆ ಪ್ರಯಾಣಿಸುವಾಗ ಆನಂದ್ ಮಹೀಂದ್ರಾ ಈ ಸೇತುವೆಯ ಮೇಲೆ ಪ್ರಯಾಣಿಸಿದ್ದಾರೆ. ಮುಸ್ಸಂಜೆಯಲ್ಲಿ ಸೇತುವೆಯ ಸೌಂದರ್ಯವನ್ನು ಸವಿಯಲು ಮತ್ತೊಮ್ಮೆ ಸೇತುವೆಯ ಮೇಲೆ ಪ್ರಯಾಣಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net