

Daughter Marries Father: ಜಗತ್ತಿನ ಅತ್ಯಂತ ಪವಿತ್ರ ಸಂಬಂಧಗಳಲ್ಲಿ ತಾಯಿ-ಮಗ, ತಂದೆ-ಮಗಳು, ಅಣ್ಣ-ತಮ್ಮ, ಅಣ್ಣ-ತಂಗಿಯರ ಬಾಂಧವ್ಯ. ಆದರೆ ರಕ್ತ ಸಂಬಂಧಗಳನ್ನು ಮದುವೆ ಬಂಧಗಳಾಗಿ ಪರಿವರ್ತಿಸಿದ ಜೋಡಿಯ ವೀಡಿಯೊವನ್ನು ನಾವು ನಿಮಗೆ ತೋರಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ಅಸಲಿ ವಿಷಯ ಏನೆಂದರೆ 20 ವರ್ಷದ ಯುವತಿಯೊಬ್ಬಳು ತನ್ನ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವನ ಪಕ್ಕದಲ್ಲಿ ನಿಂತು ನಾಚಿಕೆಯಿಲ್ಲದೆ ಮಾತನಾಡುತ್ತಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆದ ಈ ವಿಡಿಯೋದಲ್ಲಿ ನೀವಿಬ್ಬರು ಯಾರು? ಎಂದು ಕೇಳಿದಾಗ ಯುವತಿಯ ಉತ್ತರವೇನೆಂದರೆ, ನನ್ನ ತಂದೆಯೊಂದಿಗೆ ಮದುವೆಯಾಗಿ ಸುಖವಾಗಿದ್ದೇನೆ ಎಂದು ಧೈರ್ಯವಾಗಿ ಜಗತ್ತಿಗೆ ತಿಳಿಸಿದ್ದಾಳೆ. ನಮ್ಮ ಸಂಬಂಧವನ್ನು ಯಾರೂ ಬೆಂಬಲಿಸಲಿಲ್ಲ. ಆದರೆ ನಾವು ಮದುವೆಯಾಗಿದ್ದೇವೆ, ಈಗ ಯಾರಾದರೂ ಬೆಂಬಲಿಸುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಇದೇ ವಿಚಾರವಾಗಿ ತಂದೆಯನ್ನು ಕೇಳಿದರೆ ಹೌದು ಎನ್ನುತ್ತಾರೆ. ನಿಮ್ಮ ತಂದೆಯನ್ನು ಮದುವೆಯಾಗಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದರೆ ಹುಡುಗಿ ಹಾಗೂ ತಂದೆ ಪ್ರತಿಕ್ರಿಯಿಸಿದರು. ಹೇ ಗೆಳೆಯಾ, ನೀನು ಯಾವ ಯುಗದಲ್ಲಿ ಜೀವಿಸುತ್ತಿದ್ದೀ? ನಾಚಿಕೆ ಏಕೆ? ಹುಡುಗಿಗೆ 24 ವರ್ಷ ಮತ್ತು ನನಗೆ 50 ವರ್ಷ ಎಂದು ಆಕೆಯ ತಂದೆ ಹೇಳಿದ್ದಾರೆ. ನಮ್ಮ ಬಗ್ಗೆ ಜಗತ್ತಿಗೆ ಹೇಳಬೇಕೆನ್ನುವ ಕಾರಣಕ್ಕೆ ವೀಡಿಯೋ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ತಮ್ಮ ಸಂಬಂಧದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರೇ ಹೆಚ್ಚು...ಅಂತಹವರಿಗಾಗಿಯೇ ಈ ವಿಡಿಯೋ ಮಾಡಿದ್ದೇವೆ ಎಂದಿದ್ದಾಳೆ. ಆದರೆ ಈ ಹುಡುಗಿ ಯಾರು, ಅವಳ ತಂದೆ ಯಾರು,? ಈ ಘಟನೆ ನಡೆದಿರುವುದು ಎಲ್ಲಿ? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇತ್ತೀಚೆಗೆ ಜೈ ಸಿಂಗ್ ಯಾದವ್ X ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೊ 2020 ರ ಮೊದಲು ಮಾಡಿದ ಟಿಕ್‌ಟಾಕ್ ವೀಡಿಯೊದ ಕ್ಲಿಪ್ ಆಗಿದೆ. ಈಗ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಮನರಂಜನೆಗಾಗಿ ಮಾಡಲಾಗಿದೆ ಎಂದು ತೋರುತ್ತದೆ. ಆದರೆ ಈ ರೀತಿ ತಂದೆ-ಮಗಳ ಬಾಂಧವ್ಯವನ್ನು ಕೆಡಿಸುವುದು ಸಂಪೂರ್ಣ ತಪ್ಪು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹಳೆ ವಿಡಿಯೋವನ್ನು ಮತ್ತೆ ಮುನ್ನೆಲೆಗೆ ತಂದು ಸಂಬಂಧಗಳ ಕುರಿತಾಗಿ ತಪ್ಪು ಕಲ್ಪನೆ ಮೂಡಿಸುವುದು ತುಂಬಾ ದೊಡ್ಡ ತಪ್ಪು ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಿಡಿಯೋ ನೋಡಿದವರೆಲ್ಲಾ ಇದು ಫೇಕ್ ಎಂದು ಕಮೆಂಟ್ ಮಾಡುತ್ತಿದ್ದಾರೆ.