ಪವನ್​ ಕಲ್ಯಾಣ್​ ಕಾರಣದಿಂದಾಗಿ 23 ವಿದ್ಯಾರ್ಥಿಗಳ JEE ಪರೀಕ್ಷೆ ಮಿಸ್​!; ತನಿಖೆಗೆ ಆದೇಶ: ಏನಿದು ಘಟನೆ

dk - 2025-04-08T134851.695
Published on

JEE: ನಟ ಕಮ್​ ರಾಜಕಾರಣಿ ಹಾಗೂ ಪ್ರಸ್ತುತ ಆಂಧ್ರಪ್ರದೇಶ ಉಪಮುಖ್ಯಮಂತ್ರಿ(DCM) ಪವನ್​ ಕಲ್ಯಾಣ್​ ಬೆಂಗಾವಲು ಪಡೆಗಳ ಕಾರಣದಿಂದಾಗಿ ಸುಮಾರು 23 ವಿದ್ಯಾರ್ಥಿಗಳು JEE ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ಅಭ್ಯಾರ್ಥಿಗಳ ಪಾಲಕರು ಆರೋಪ ಮಾಡಿದ್ದಾರೆ.

ಇದೀಗ ಈ ರಾಜ್ಯಾದ್ಯಂತ ಭುಗಿಲೆದ್ದಿದೆ.ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಸುವಂತೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಡಿಸಿಎಂ ಪವನ್​ ಕಲ್ಯಾಣ್​​, ತನಿಖೆಗೆ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ..?

ಪವನ್ ಕಲ್ಯಾಣ್ ಸೋಮವಾರ(ಏ.07) ಬೆಳಿಗ್ಗೆ ಅಲ್ಲೂರಿ ಸೀತಾರಾಮ ರಾಜು ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ಎರಡು ದಿನಗಳ ಪ್ರವಾಸಕ್ಕಾಗಿ ವಿಶಾಖಪಟ್ಟಣಕ್ಕೆ ಆಗಮಿಸಿದ್ದರು.

ಸೋಮವಾರ ಬೆಳಿಗ್ಗೆ 8:30ರ ಸುಮಾರಿಗೆ ಪರೀಕ್ಷಾ ಕೇಂದ್ರ ತಲುಪಲು ಹೊರಟಿದ್ದ ವಿದ್ಯಾರ್ಥಿಗಳು, ಇಲ್ಲಿನ ಪೆಂಡುರ್ಥಿ ರಸ್ತೆಯಲ್ಲಿ ಅನೇಕ ನಿಮಿಷಗಳ ಕಾಲ ಟ್ರಾಫಿಕ್​ ಉಂಟಾಗಿದೆ. ಇದಕ್ಕೆ ಕಾರಣ ಪವನ್ ಕಲ್ಯಾಣ್ ಸೋಮವಾರ ಜಿಲ್ಲಾ ಪ್ರವಾಸದಲ್ಲಿದ ಕಾರಣದಿಂದಾಗಿ ಅವರ ಬೆಂಗಾವಲು ಪಡೆಯು ಪೆಂಡುರ್ಥಿ ಮೂಲಕ ಹಾದು ಹೋಗುತ್ತಿದೆ ಎಂದು ಪೊಲೀಸರು ಎನ್ಎಡಿ ಕೋಠಾ ರಸ್ತೆಯಿಂದ ಪೆಂಡುರ್ಥಿಗೆ ಸಂಪೂರ್ಣ ಮಾರ್ಗದಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಇದರಿಂದಾಗಿ ಸಮಯ ತುಂಬಾ ತಡವಾಗಿದ್ದರಿಂದ ನಮ್ಮ ಮಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಯಾವುದೇ ಸಂಚಾರ ಸಮಸ್ಯೆಗಳಿಲ್ಲದಿದ್ದರೆ, ನಾವು ಮೊದಲೇ ತಲುಪುತ್ತಿದ್ದೆವು ಎಂದು ಪಾಲಕರು ಮಾಧ್ಯಮಗಳ ಮುಂದೆ ತಮ್ಮ ಆಳಲು ತೊಡಿಕೊಂಡಿದ್ದಾರೆ.

ಇದೀಗ ಪಾಲಕರ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್​ ಆಗಿದೆ. ಈ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ತನಿಖೆಗೆ ಆದೇಶಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net