

ಬೆಂಗಳೂರು: ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗೆ 18.34 ಕೋಟಿ ರೂ. ನಷ್ಟ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ 23.02 ಕೋಟಿ ರೂ. ದಂಡ ವಿಧಿಸಿದೆ.
ಖಾಸಗಿ ಕಂಪನಿ ನಿರ್ದೇಶಕ ಜಿ. ಧನಂಜಯರೆಡ್ಡಿಗೆ 4 ವರ್ಷಗಳ ಸರಳ ಶಿಕ್ಷೆ, 10 ಕೋಟಿ ರೂ. ದಂಡ, ಕೆ. ಸತ್ಯನಾರಾಯಣ ಎಂಬಾತನಿಗೆ 4 ವರ್ಷ ಸರಳ ಶಿಕ್ಷೆ 12 ಕೋಟಿ ರೂ. ದಂಡ, ಖಾಸಗಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಜಿ. ನಿರ್ಮಲಾಗೆ 1 ವರ್ಷ ಸರಳ ಶಿಕ್ಷೆ, 1 ಲಕ್ಷ ರೂ. ದಂಡ, ಖಾಸಗಿ ಕಂಪನಿ ನಿರ್ದೇಶಕ ದಿನೇಶ್ ಕಾವೂರು ಎಂಬಾತನಿಗೆ 1 ವರ್ಷ ಸರಳ ಶಿಕ್ಷೆ, 1 ಲಕ್ಷ ರೂ. ದಂಡ, ಯುನೈಟೆಡ್ ಬ್ಯಾಂಕ್ ಇಂಡಿಯಾದ ಕಂಟೋನ್ಮೆಂಟ್ ಶಾಖೆ ಎಜಿಎಂ ಆಗಿದ್ದ ರಾಜೇಶ್‌ಕುಮಾರ್ ಮಾಧವ್‌ಗೆ 1 ವರ್ಷದ ಸರಳ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ನೆಕ್ಸಾಫ್ಟ್ೃ ಇನ್‌ಫೊಟೆಲ್ ಲಿಮಿಟೆಡ್ ಕಂಪನಿಗೆ 1 ಕೋಟಿ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಯುನೈಟೆಡ್ ಬ್ಯಾಂಕ್ ಆ್ ಇಂಡಿಯಾದ ಕಂಟೋನ್ಮೆಂಟ್ ಶಾಖೆಯಲ್ಲಿ ದುಬೈ ಮೂಲದ ಕಂಪನಿಯಿಂದ ಸಾಫ್ಟ್‌ವೇರ್ ಆಮದು ಕೊಂಡುಕೊಳ್ಳಲು 16 ಕೋಟಿ ರೂ. ಸಾಲ ಪಡೆದಿದ್ದರು. 21.5 ಕೋಟಿ ರೂ.ಸಾಫ್ಟ್‌ವೇರ್ಸಾ ಪ್ಯಾಕೇಜ್ ಮೇಲೆ ವಿಶೇಷ ಶುಲ್ಕ ಮತ್ತು ಬೆಂಗಳೂರಿನ ಸಾದರಮಂಗಲ ಗ್ರಾಮದಲ್ಲಿ 1 ಎಕರೆ 30 ಗುಂಟೆ ಜಮೀನು ಮೇಲಾಧಾರ ಭದ್ರತೆ ಒದಗಿಸಿದ್ದರು.
ಆದರೆ, ಭದ್ರತಾ ನಿಧಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದರು. ಇದರಿಂದ 2011ರ ಜೂ. 30ರಿಂದ ಈ ಸಾಲ ಎನ್‌ಪಿಎ ಆಗಿತ್ತು. 13.44 ರೂ. ಸಾಲದ ಮೊತ್ತ ಬಳಿಕ 18.34 ಕೋಟಿ ರೂ.ಗೆ ತಲುಪಿ ಬ್ಯಾಂಕಿಗೆ ನಷ್ಟ ಉಂಟಾಗಿತ್ತು. ಈ ಸಂಬಂಧ 2013ರ ಮೇ 4ರಂದು ಸಿಬಿಐನಲ್ಲಿ ಕೇಸು ದಾಖಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.