

ನವದೆಹಲಿ: ಸಂಸತ್ ಮೇಲೆ ದಾಳಿ ನಡೆದು ಇಂದಿಗೆ 22 ವರ್ಷ ಕಳೆದಿದೆ. ಇಂದು ಲೋಕಸಭೆಯ ಕಲಾಪದ ವೇಳೆ ಇಂತಹ ಘಟನೆಯೇ ನಡೆದಿದೆ. ಓರ್ವ ಪುರುಷ ಮತ್ತು ಮಹಿಳೆ ಕಲಾಪ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಿಂದ ಯುವಕರು ಗ್ಯಾಲರಿಯಿಂದ ಜಿಗಿದು ಬಣ್ಣವನ್ನು ಸೂಸುವ ಅನಿಲ ವಸ್ತು ಎಸೆದು ಆತಂಕ ಸೃಷ್ಟಿ ಮಾಡಿದ್ದಾರೆ. ಈ ವೇಳೆ 22 ವರ್ಷಗಳ ಹಿಂದೆ ನಡೆದ ಭಯೋತ್ಪಾದಕರ ದಾಳಿಯನ್ನು ನೆನಪು ಮಾಡುವಂತಾಗಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು ಡಿಸೆಂಬರ್ 13, 2001 ರಂದು ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಸಂಸತ್ ಮೇಲೆ ದಾಳಿ ನಡೆದು ಇಂದಿಗೆ 22 ವರ್ಷವೇ ಕಳೆದಿದೆ. ಆದರೆ ಸರಿಯಾಗಿ 20 ವರ್ಷಕ್ಕೆ ಮತ್ತೆ ಹೀಗೆ ಇಂತಹ ಒಂದು ಅವಘಡ ಸಂಭವಿಸಿರುವುದು ಆತಂಕ ಸೃಷ್ಟಿ ಮಾಡಿದೆ.
ವಿಡಿಯೋದಲ್ಲಿ ಏನಿದೆ?: ಲೋಕಸಭೆಯ ಕಲಾಪದ ನೇರ ಪ್ರಸಾರ ವಿಡಿಯೊ ನೋಡಿದರೆ, ಒಬ್ಬರು ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಾಣಬಹುದು. ಅದೇ ವೇಳೆ ಇನ್ನೊಬ್ಬರು ಸಂದರ್ಶಕರ ಗ್ಯಾಲರಿಯಿಂದ ಬಣ್ಣದ ಹೊಗೆ ಸೂಸುವ ವಸ್ತುವನ್ನು ಬಿಸಾಡಿದ್ದಾರೆ. ಸದನದಲ್ಲಿ ಹಳದಿ ಬಣ್ಣದ ಹೊಗೆ ತುಂಬಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಅಷ್ಟರಲ್ಲಿ ಸಂಸದರು, ಭದ್ರತಾ ಸಿಬ್ಬಂದಿಗಳು ಆ ಇಬ್ಬರು ವ್ಯಕ್ತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಅಮ್ರೋಹಾ ಸಂಸದ ಕುನ್ವರ್ ಡ್ಯಾನಿಶ್ ಅಲಿ, ಈ ರೀತಿ ಸದನಕ್ಕೆ ನುಗ್ಗಿದ ವ್ಯಕ್ತಿಗಳು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಅವರಿಗೆ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲಿಗೆ ನಾನು ಸಂದರ್ಶಕರ ಗ್ಯಾಲರಿಯಿಂದ ಯಾರೋ ಕೆಳಗೆ ಬಿದ್ದಿದ್ದಾರೆ ಎಂದು ಭಾವಿಸಿದೆ. ಎರಡನೇ ವ್ಯಕ್ತಿ ಜಿಗಿದ ನಂತರವೇ ಅದು ಭದ್ರತಾ ಲೋಪ ಎಂದು ನಾನು ಅರಿತುಕೊಂಡೆ .ಅನಿಲವು ವಿಷಕಾರಿಯಾಗಿರಬಹುದು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.