ಅಮ್ಮನನ್ನು ಇರಿದು ಕೊಂದ ಮಗ...; ನೆರೆಮನೆಯವರು ಬಾಯ್ಬಿಟ್ಟರು ಇವರ ಬಗೆಗಿನ ಸತ್ಯ

Murder vvani
Published on

ನವದೆಹಲಿ: 22 ವರ್ಷದ ಯುವಕ ತನ್ನ ತಾಯಿಯನ್ನೇ ಕೊಲೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಮಡನ್​​ಗಿರ್​ನಲ್ಲಿ ನಡೆದಿದೆ.

ಇಂದು ಮಧ್ಯಾಹ್ಯ ಯುವಕ ತನ್ನ 45 ವರ್ಷದ ತಾಯಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಮಹಿಳೆ ರಕ್ತದ ಮಡುವಿನಲ್ಲಿ, ಎಚ್ಚರವಿಲ್ಲದೆ ಬಿದ್ದಿದ್ದರು.

ಮೃತ ಮಹಿಳೆಯ ಹೆಸರು ಅಂಜಲಿ. ಮಗ ಸಾಗರ್​ನೇ ಅಂಜಲಿಯನ್ನು ಇರಿದು ಹತ್ಯೆ ಮಾಡಿದ್ದಾಗಿ ನೆರೆಹೊರೆಯವರು ಹೇಳಿಕೆ ಕೊಟ್ಟಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆತನೂ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಅತುಲ್​ ಠಾಕೂರ್​ ತಿಳಿಸಿದ್ದಾರೆ.

ಆರು ತಿಂಗಳ ಹಿಂದಷ್ಟೇ ಈ ತಾಯಿ-ಮಗ ಮಡನ್​ಗಿರ್​​ನಲ್ಲಿರುವ ಬಾಡಿಗೆ ಮನೆಯೊಂದಕ್ಕೆ ಬಂದು ವಾಸಿಸಲು ಪ್ರಾರಂಭಿಸಿದ್ದರು. ಆದರೆ ಇವರಿಬ್ಬರೂ ಒಂದು ದಿನವೂ ಜಗಳ ಆಡಿದ್ದು ನಮಗಂತೂ ಗೊತ್ತಾಗಲಿಲ್ಲ. ಮನೆಯಿಂದ ಗಲಾಟೆಯೂ ಕೇಳುತ್ತಿರಲಿಲ್ಲ ಎಂದು ಮನೆಯ ಸಮೀಪ ಇದ್ದವರು ತಿಳಿಸಿದ್ದಾರೆ. ಅಲ್ಲದೆ, ಬಾಡಿಗೆ ಮನೆ ಮಾಲೀಕನೂ ಇದೇ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮನೆ ಕುಸಿದು ಮೃತಪಟ್ಟ ಮಹಿಳೆ ಕುಟುಂಬಸ್ಥರಿಗೆ ಶಾಸಕರಿಂದ ಸಾಂತ್ವನ

ಆದರೆ ಇಂದು ಬೆಳಗ್ಗೆಯಿಂದ ಮನೆಯಿಂದ ಒಂದೇ ಸಮ ಗಲಾಟೆ ಕೇಳುತ್ತಿತ್ತು. ತಾಯಿ ಮಗ ಇಬ್ಬರೂ ಜಗಳ ಆಡುತ್ತಿದ್ದರು. ಮಾತಿಗೆ ಮಾತು ಬೆಳೆಸಿದ್ದರು ಎಂದೂ ಹೇಳಿದ್ದಾರೆ.

ಮನೆಯಿಂದ ಅರಚಾಟ ಕೇಳುತ್ತಿದ್ದಂತೆ ನೆರೆಮನೆಯವರು ಪ್ರವೇಶ ಮಾಡಿದರು. ಅಷ್ಟರಲ್ಲಿ ಅಂಜಲಿ ಕೆಳಗೆ ಬಿದ್ದಿದ್ದರು. ಸಾಗರ್​ ಡ್ರಗ್​ ಹಾಗೂ ಮದ್ಯಕ್ಕೆ ಅಡಿಕ್ಟ್ ಆಗಿದ್ದ. ಕೊಲೆಗೆ ನಿಜವಾದ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net