ಮನೆ ಕುಸಿದು ಮೃತಪಟ್ಟ ಮಹಿಳೆ ಕುಟುಂಬಸ್ಥರಿಗೆ ಶಾಸಕರಿಂದ ಸಾಂತ್ವನ

HHP 20-1
Published on

ಹೂವಿನಹಿಪ್ಪರಗಿ: ಗ್ರಾಮದಲ್ಲಿ ಭಾನುವಾರ ಸಂಜೆ ಜಿಟಿ ಜಿಟಿ ಮಳೆಗೆ ಮನೆಯ ಗೋಡೆ ನೆನದು ಕುಸಿದು ಗ್ರಾಮದ ಲಾಲಾಬಿ ನಬಿಸಾಬ ಶಾಬಾದಿ ಮೃತ ಪಟ್ಟ ಹಿನ್ನೆಲೆ ಸೋಮವಾರ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಅಲ್ಲದೆ, ಸರ್ಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳ ಜತೆಗೆ ಮಾತನಾಡಿ ಕುಟುಂಬಸ್ಥರಿಗೆ ಸಹಾಯ ಮಾಡುವ ಭರವಸೆ ನೀಡಿದರು.
ಬಸವನಬಾಗೇವಾಡಿ ತಹಸೀಲ್ದಾರ್ ಎಂ. ಎನ್. ಬಳಗಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಲ್ಪನಾ ಬಸವರಾಜ, ಡಾ.ಬಿ. ಎಸ್. ಸಂದಿಮನಿ, ಉಪತಹಸೀಲ್ದಾರ್ ಜಿ.ಟಿ. ನಾಯಕ, ಪಿಎಸ್‌ಐ ಚಂದ್ರಶೇಖರ ಹೆರಕಲ್ಲ, ಕಂದಾಯ ನಿರೀಕ್ಷಕ ವಿ.ಜಿ. ಸಿಂದಗಿ ಗ್ರಾಮ ಲೆಕ್ಕಾಧಿಕಾರಿ ಸಲೀಂ ಯಲಗೋಡ, ಪಿಡಿಒ ಕಲ್ಯಾಣಿ, ಹಣಂತರಾಯ ಗುಂಕಿ, ಮಶ್ಯಾಕ ಬಿರಾದಾರ, ಶಬ್ಬೀರ್ ಮುಲ್ಲಾ, ರಮಜಾನ್ ಮುಜಾವರ, ಮಲ್ಲು ನಾಡಗೌಡ, ಶಾಂತಪ್ಪಗೌಡ ನಾಡಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net