ಮಹಾರಾಷ್ಟ್ರದಲ್ಲಿದ್ದ 22 ಬಾಂಗ್ಲಾದೇಶದ ನಾಗರಿಕರ ಬಂಧನ: ಯಾವುದೇ ಮಾನ್ಯ ದಾಖಲೆ ಇಲ್ಲದೆ ಅಕ್ರಮವಾಗಿ ದೇಶಕ್ಕೆ ಬಂದಿದ್ದ ವಲಸಿಗರು

bangla
Published on

ಪಾಲ್ಘರ್​: ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ಅಕ್ರಮವಾಗಿ ತಂಗಿದ್ದ 22 ಜನ ವಲಸಿಗರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಬಾಂಗ್ಲಾದೇಶದಿಂದ ಬಂದವರು ಎನ್ನಲಾಗಿದೆ.

ಮಂಗಳವಾರ ತಡರಾತ್ರಿಯಲ್ಲಿ ರಾಜೋಡಿ ಗ್ರಾಮದ ಗುಡಿಸಲುಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯಾವುದೇ ಮಾನ್ಯ ದಾಖಲೆಗಳು ಇರದ ಒಟ್ಟು 22 ಜನರು ಸಿಕ್ಕಿಬಿದ್ದಿದ್ದಾರೆ. 12 ಮಹಿಳೆಯರು ಸೇರಿದಂತೆ 22 ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರೆಲ್ಲರು ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಎನ್ನಲಾಗಿದೆ.

ಭಾರತೀಯ ಪಾಸ್​ಪೋರ್ಟ್​ ಕಾಯ್ದೆ 1920 ಮತ್ತು ವಿದೇಶಿ ರಾಷ್ಟ್ರೀಯ ಕಾಯ್ದೆ 1946ರ ಅಡಿಯಲ್ಲಿ ಬಂಧಿತರ ಮೇಲೆ ದೂರು ದಾಖಲಿಸಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net