

7ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಜುಲೈ 6ಕ್ಕೆ ಜರ್ಮನಿಯಲ್ಲಿ ಆಯೋಜಿಸಲಾಗಿದೆ ಎಂದು ನಾವಿಕ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ರೈ ಮೈನ್ ಕನ್ನಡ ಸಂಘದ ಸಹಯೋಗದೊಂದಿಗೆ ಜರ್ಮನಿಯ ಫ್ರಾಂಕ್ಫರ್ಟ್‌ನಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ , ನಾಟಕ, ನೃತ್ಯ, ಗಾಯನ, ಶೈಕ್ಷಣಿಕ ವೇದಿಕೆ, ಔದ್ಯಮಿಕ ವೇದಿಕೆ , ಕವಿಗೋಷ್ಠಿ, ಕನ್ನಡ-ಕಲಿ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಸಮ್ಮೇಳನದ ಜೊತೆಗೆ ಹನ್ನೊಂದು ದಿನಗಳ ಯೂರೋಪ್ ಟೂರ್ ಪ್ಯಾಕೇಜ್ನ್ನು ಆಯೋಜಿಸಲಾಗಿದ್ದು, ಜೂನ್ 26 ರಿಂದ ಜುಲೈ 07 ವರೆಗೆ ಪ್ರವಾಸ ಏರ್ಪಡಿಸಲಾಗಿದೆ.
ಯುರೋಪಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಜರ್ಮನಿಯ ಕನ್ನಡಿಗರು ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿರುವುದಾಗಿ ರೈನ್ ಮೈನ್ ಕನ್ನಡ ಸಂಘದ ಮುಖ್ಯಸ್ಥ ವೇದ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾವಿಕ ಸಂಸ್ಥೆಯು ಒಂದು ವರ್ಷ ಅಮೇರಿಕಾದಲ್ಲಿ ಮತ್ತೊಂದು ವರ್ಷ ವರ್ಷ ಅಮೇರಿಕಾ ಹೊರತುಪಡಿಸಿ ಇತರೆ ರಾಷ್ಟ್ರದಲ್ಲಿ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. 2022 ರಲ್ಲಿ ಆಫ್ರಿಕಾದ ಕೀನ್ಯಾ ದೇಶದ ನೈರೋಬಿಯಲ್ಲಿ ನಾವಿಕೋತ್ಸವ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತ್ತು.