More

    ಕನ್ನಡ ವಾತಾವರಣದಲ್ಲಿ ಇಂಗ್ಲಿಷ್ ಕಲಿಯಿರಿ ; ನಾಡೋಜ ವೂಡೇ ಪಿ.ಕೃಷ್ಣ ಸಲಹೆ

    ಬೆಂಗಳೂರು : ಸ್ಮರ್ಧಾತ್ಮಕ ಜಗತ್ತಿನಲ್ಲಿ ಭಾಷೆಯ ಬಳಕೆ ಮತ್ತು ಕಲಿಕೆ ಬಹಳ ಪ್ರಮುಖವಾಗಿದ್ದು, ಇಂಗ್ಲಿಷ್ ಅತ್ಯಂತ ಅವಶ್ಯಕ ಭಾಷೆಯಾಗಿದೆ. ಆದರೆ ಕನ್ನಡ ವಾತಾವರಣದಲ್ಲಿ ಇಂಗ್ಲಿಷನ್ನು ಕಲಿಯುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ನಾಡೋಜ ವೂಡೇ ಪಿ.ಕೃಷ್ಣ ಸಲಹೆ ನೀಡಿದ್ದಾರೆ.

    ಶೇಷಾದ್ರಿಪುರಂ ಸ್ವತಂತ್ರ ಪಿಯು ಕಾಲೇಜಿನ 52ನೇ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಆಧುನಿಕತೆಯ ವೇಗಕ್ಕೆ ತಕ್ಕಂತೆ ನಮ್ಮ ಭಾಷೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕನ್ನಡ ವಾತಾವರಣದಲ್ಲಿ ಇಂಗ್ಲಿಷ್ ಕಲಿಯುವುದರಿಂದ ಯಾವುದೇ ಅಪಾಯ ಇಲ್ಲ.

    ಯಾವುದೇ ಶಿಕ್ಷಣ ಸಂಸ್ಥೆಗಳಿಂದ ಎಷ್ಟು ಪದವಿದರರು ತಯಾರಾದರೂ ಎಂಬುದಕ್ಕಿಂತ, ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳುವ ಎಷ್ಟು ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಕಾರ್ಯ ಗೌರವಾರ್ಹ ಎಂದು ಅವರು ವಿವರಿಸಿದರು.

    ಸಮಾರಂಭದ ಮೊದಲಿಗೆ ಕಾಜೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ನವದುರ್ಗೆ ಅವತಾರದ ಸ್ವಾಗತ ನೃತ್ಯ ಎಲ್ಲರ ಗಮನ ಸೆಳೆಯಿತು. ಸಮಾರಂಭದಲ್ಲಿ ಮಿಮಿಕ್ರಿ ದಯಾನಂದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಹಾಸ್ಯ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಎನ್.ಆರ್.ಪಂಡಿತಾರಾಧ್ಯ, ಟ್ರಸ್ಟಿಗಳಾದ ಬಿ.ಎ.ಅನಂತರಾಂ, ಕೆ.ಕೃಷ್ಣಸ್ವಾಮಿ, ರಾಜು ಚಂದ್ರಶೇಖರ್, ಎಂ.ಎಸ್.ನಟರಾಜ ಪ್ರಾಂಶಪಾಲರಾದ ಆರ್.ವಿ.ಮಂಜುನಾಥ, ಸಾಂಸ್ಕೃತಿಕ ಸಂಚಾಲಕ ಡಾ.ಸಿಸಿರಾ ಮತ್ತು ಕಾಲೇಜಿನ ಸಿಬ್ಬಂಧಿಗಳು ಉಪಸ್ಥಿತರಿದ್ದರು.

    ಶಿಕ್ಷಣ ಕೇವಲ ಪಠ್ಯದಲ್ಲಿ ಸಿಗುವುದಲ್ಲ: ಶಿಕ್ಷಣ ಕೇವಲ ಪಠ್ಯದಲ್ಲಿ ಮಾತ್ರವಲ್ಲ; ನಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ದೊರೆಯುತ್ತದೆ. ಕಷ್ಟ, ಸಮಸ್ಯೆಗಳನ್ನು ಅನುಭವಿಸಿ ಜೀವನದ ಮೌಲ್ಯವನ್ನು ಅರಿತು ಉನ್ನತ ಸ್ಥಾನ ತಲುಪಿದ ನಂತರ, ನೀವು ಶಿಕ್ಷಣ ಕಲಿತ ಕಾಲೇಜನ್ನು, ಶಿಕ್ಷಕರನ್ನು ಮರೆಯಬೇಡಿ ಎಂದು ಮಿಮಿಕ್ರಿ ದಯಾನಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಪಿಯುಸಿ ಜೀವನದ ಪ್ರಮುಖ ತಿರುವು : ವಿದ್ಯಾರ್ಥಿಗಳ ಮುಂದಿನ ಜೀವನವನ್ನು ರೂಪಿಸುವ ಪ್ರಮುಖವಾದ ಘಟ್ಟ ಪಿಯುಸಿ. ಈ ಹಂತದಲ್ಲಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ತಾಯಿ, ತಂದೆ ಮತ್ತು ಗುರುಗಳು ನಿಮ್ಮ ಪಾಲಿಗೆ ದೇವರುಗಳಿದ್ದಂತೆ ಎಂದು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts