ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹಿಂಪಡೆದಿದೆ. ಹಾಗಂತ ಯಾರ ಬಳಿಯಾದರೂ ಎರಡು ಸಾವಿರ ರೂಪಾಯಿ ನೋಟುಗಳಿದ್ದರೆ ಚಿಂತೆಗೆ ಒಳಗಾಗಬೇಕಿಲ್ಲ. ಅದನ್ನು ಬ್ಯಾಂಕ್ಗೆ ಹಿಂದಿರುಗಿಸಿ ಬೇರೆ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಅವಕಾಶ ಇದೆ.
ಎರಡು ಸಾವಿರ ರೂ. ನೋಟುಗಳನ್ನು ಯಾವುದೇ ಬ್ಯಾಂಕ್ನಲ್ಲಿ ಅಥವಾ ಯಾವುದೇ ವಿನಿಮಯ ಕೇಂದ್ರಗಳಲ್ಲಿ ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಬಹುದು. ಆರ್ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ಇದಕ್ಕೆ ಅವಕಾಶ ಇದೆ.
ನೋಟುಗಳನ್ನು ಬದಲಿಸಿಕೊಳ್ಳಲು ಇದೇ ಮೇ 23ರಿಂದ ಬ್ಯಾಂಕ್ಗಳಲ್ಲಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆದರೆ ಒಮ್ಮೆಗೆ ಹತ್ತು ನೋಟುಗಳನ್ನಷ್ಟೇ ಬದಲಿಸಿಕೊಳ್ಳಬೇಕು. ಬ್ಯಾಂಕ್ನಲ್ಲಿ ಕಾರ್ಯದೊತ್ತಡ ಉಂಟಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ಸೆ. 30ರ ವರೆಗೆ ಎರಡು ಸಾವಿರ ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವಿದೆ.