200 ವರ್ಷ ಹಳೆಯದಾದ 'ಕಾಂಡೋಮ್​'​ ಪ್ರದರ್ಶನ: ಇದರ ಬಗ್ಗೆ ವಸ್ತುಸಂಗ್ರಹಾಲಯ ಹೇಳಿದ್ದೇನು? | Condom

dk - 2025-06-09T125951.446
Published on

Condom: ನೆದರ್ಲ್ಯಾಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿರುವ ರಿಜ್ಕ್ಸ್‌ಮ್ಯೂಸಿಯಂನಲ್ಲಿ ಸುಮಾರು 200 ವರ್ಷ ಹಳೆಯದಾದ ಕಾಂಡೋಮ್ ಅನ್ನು ಪ್ರದರ್ಶಿಸಲಾಗಿದೆ.

ಈ ಕಾಂಡೋಮ್ ಅನ್ನು ಕುರಿಯ ಅಪೆಂಡಿಕ್ಸ್‌ನಿಂದ ತಯಾರಿಸಲಾಗಿದೆ ಎಂದು ನಂಬಲಾಗಿದೆ. ಒಬ್ಬ ಸನ್ಯಾಸಿನಿ ಮತ್ತು ಮೂವರು ಪಾದ್ರಿಗಳನ್ನು ಪ್ರತಿನಿಧಿಸುವ ಸ್ಪಷ್ಟ ಮುದ್ರಣವನ್ನು ಈ ಕಾಂಡೋಮ್​​ ಹೊಂದಿದೆ.

ಈ ಅಪರೂಪದ ಕಲಾಕೃತಿ 1830ರ ಹಿಂದಿನದು ಮತ್ತು ಕಳೆದ ವರ್ಷ ವಸ್ತುಸಂಗ್ರಹಾಲಯವು ಹರಾಜಿನಲ್ಲಿ ಖರೀದಿಸಿತು. ಈ ಕಾಂಡೋಮ್ 19 ನೇ ಶತಮಾನದ ವೇಶ್ಯಾವಾಟಿಕೆ ಮತ್ತು ಲೈಂಗಿಕತೆಯ ಪ್ರದರ್ಶನದ ಭಾಗವಾಗಿದೆ. ಮುದ್ರಣಗಳು, ರೇಖಾಚಿತ್ರಗಳು ಮತ್ತು ಛಾಯಾಚಿತ್ರಗಳು ಸಹ ಪ್ರದರ್ಶನದ ಭಾಗವಾಗಿದೆ ಎಂದು ಸಂಗ್ರಹಾಲಯ ಹೇಳಿದೆ.

ಮ್ಯೂಸಿಯಂ ಹೇಳಿದ್ದೇನು..?

ರಿಜ್ಕ್ಸ್‌ಮ್ಯೂಸಿಯಂ ಕ್ಯುರೇಟರ್ ಜಾಯ್ಸ್ ಝೆಲೆನ್ ಈ ಕಾಂಡೋಮ್​​ ಕುರಿತು ಮಾತನಾಡಿ, '' ಇದು ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ" ಇದನ್ನು ಪ್ರದರ್ಶನಕ್ಕೆ ಇಟ್ಟಾಗಿನಿಂದ ವಸ್ತುಸಂಗ್ರಹಾಲಯವು ಯುವಕರು ಮತ್ತು ಹಿರಿಯರು ಸೇರಿದಂತೆ ಜನರಿಂದ ತುಂಬಿದೆ ಮತ್ತು ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಅವರು ಹೇಳಿದರು.

"ಇಂದ್ರಿಯ ಸುಖದ ಅನ್ವೇಷಣೆಯು ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳು ವಿಶೇಷವಾಗಿ ಸಿಫಿಲಿಸ್ ಭಯದಿಂದ ತುಂಬಿದ್ದ ಯುಗದಲ್ಲಿ, ಈ ಅಸಾಮಾನ್ಯ ವಸ್ತುವು ಲೈಂಗಿಕ ಆರೋಗ್ಯದ ಹಗುರ ಮತ್ತು ಗಾಢವಾದ ಬದಿಗಳನ್ನು ಒಳಗೊಂಡಿದೆ" ಎಂದು ವಸ್ತುಸಂಗ್ರಹಾಲಯ ಹೇಳಿದೆ. ಅಲ್ಲದೆ, ಕಾಂಡೋಮ್ ಮೇಲೆ "Voilà mon choix" ಎಂದು ಬರೆದಿದ್ದು, ಇದರರ್ಥ "ನನ್ನ ಆಯ್ಕೆ ಇದೆ". ಎಂದು ಹೇಳಿದರು.

ಡಚ್ ವಸ್ತುಸಂಗ್ರಹಾಲಯವು ತಮ್ಮ ಪ್ರಿಂಟ್ ರೂಮ್ ಸಂಗ್ರಹವು ಸುಮಾರು 750,000 ಮುದ್ರಣಗಳು, ರೇಖಾಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಹೊಂದಿದೆ ಎಂದು ಹೇಳುತ್ತದೆ ಆದರೆ ಕಾಂಡೋಮ್ ಮೇಲಿನ ಮುದ್ರಣದ ಸಂಗ್ರಹದಲ್ಲಿ ಇದು ಮೊದಲ ಉದಾಹರಣೆಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net