

Assaulted: ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಲು ಹಾಗೂ ಬಾರ್ ನರ್ತಕಿಯಾಗಿ ಡ್ಯಾನ್ಸ್ ಮಾಡಲು ನಿರಾಕರಿಸಿದ್ದಕ್ಕಾಗಿ ಆಕೆಯನ್ನು ವ್ಯಕ್ತಿಯೊಬ್ಬ 6 ತಿಂಗಳು ಕಾಲ ಬಂಧನದಲ್ಲಿಟ್ಟು ನಿರಂತರವಾಗಿ ಥಳಿಸಿ ಹಲ್ಲೆ ಮಾಡಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲೆಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ನಿವಾಸಿಯಾಗಿರುವ ಮಹಿಳೆಯನ್ನು ಆರೋಪಿ ಅರಿಯಾನ್ ಖಾನ್ ಮತ್ತು ಆತನ ತಾಯಿ ಶ್ವೇತಾ ಖಾನ್ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಬಾರ್ ನರ್ತಕಿಯಾಗಿ ಕೆಲಸ ಮಾಡಲು ಆಕೆಗೆ ಆಫರ್ ನೀಡಿದ್ದರು ಎನ್ನಲಾಗಿದೆ. ಮಹಿಳೆ ನಿರಾಕರಿಸಿದಾಗ, ಆರೋಪಿಗಳು ತಮ್ಮ ಫ್ಲಾಟ್ನಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ. ಆರೋಪಿಗಳು ಆಕೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್ ಅನ್ನು ಸೇರಿಸಲು ಪ್ರಯತ್ನಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.
ಆಕೆಯನ್ನು ತುಂಬಾ ಕೆಟ್ಟದಾಗಿ ಥಳಿಸಲಾಗಿದ್ದು, ಆಕೆ ನೇರವಾಗಿ ನಿಲ್ಲಲು ಸಹ ಸಾಧ್ಯವಾಗುತ್ತಿರಲಿಲ್ಲ. ಕಬ್ಬಿಣದ ಸರಳುಗಳಿಂದ ಪದೇ ಪದೇ ಹೊಡೆದಿದ್ದರಿಂದ ಮಹಿಳೆಯ ತಲೆ, ಕಾಲುಗಳು ಮತ್ತು ಸೊಂಟಕ್ಕೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ.
ಆಕೆಯ ಕುಟುಂಬವು ಖರ್ದಾಹಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆ ಶನಿವಾರ ಆರೋಪಿಯ ಮನೆಯಿಂದ ಪರಾರಿಯಾಗಿದ್ದಾಳೆ. ಮಹಿಳೆಯ ಕುಟುಂಬದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೌರಾ ಜಿಲ್ಲೆಯ ನಿವಾಸಿ ಆರೋಪಿ ಅರಿಯನ್ ಖಾನ್ ಮಹಿಳೆಗೆ ಹೆಚ್ಚಿನ ಆದಾಯದ ಕೆಲಸ ನೀಡುವುದಾಗಿ ಹೇಳಿದ್ದ. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆತನ ಮಾತು ನಂಬಿ ಹೌರಾಗೆ ತೆರಳಿ ಅಲ್ಲಿ ಡೊಮ್ಜೂರ್ನಲ್ಲಿರುವ ಆತನ ಫ್ಲಾಟ್ನಲ್ಲಿ ಬಲವಂತವಾಗಿ ಬಂಧಿಸಲ್ಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)