

200 Foreigners Embrace Sanatan Dharm: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಸಾಕಷ್ಟು ಮಂದಿ ತೆರೆಳುತ್ತಿದ್ದಾರೆ. ನಟ, ನಟಿಯರು, ಗಣ್ಯರು, ರಾಜಕೀಯ ನಾಯಕರು ಭಾಗಿಯಾಗಿ ತ್ರಿವೇಣಿ ಸಂಗಮದ ನೀರಿನಲ್ಲಿ ಮಿಂದು ಪವಿತ್ರರಾಗುತ್ತಿದ್ದಾರೆ. ಈ ಧಾಮಿರ್ಕ ಕಾರ್ಯಕ್ರಮದಲ್ಲಿ ಭಾಗಿಯಾದಸಾಕಷ್ಟು ವಿದೇಶಿಗರು ಸನಾತನ ಧರ್ಮದ ಕುರಿತಾಗಿ ಆಸಕ್ತಿ ತೋರಿಸುವುದು ಚರ್ಚೆಯ ವಿಷಯವಾಗಿದೆ.
ವಿದೇಶಿಯರು ಸಹ ಸನಾತನ ಧರ್ಮವನ್ನು ಪ್ರವೇಶಿಸುತ್ತಿದ್ದಾರೆ. ಅನೇಕ ವಿದೇಶಿಯರು ಬಿಡುವಿಲ್ಲದ ಜೀವನದ ಬಲೆಗೆ ಬೀಳುತ್ತಿದ್ದಾರೆ, ಹಣ ಸಂಪಾದಿಸುವ ಓಟದಲ್ಲಿ ಮುಳುಗಿದ್ದಾರೆ ಮತ್ತು ಮಾನಸಿಕ ನೆಮ್ಮದಿಯ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವನ್ನು ವೀಕ್ಷಿಸಿದ ನಂತರ ಅನೇಕ ವಿದೇಶಿಯರು ಇತ್ತೀಚೆಗೆ ಸನಾತನ ಧರ್ಮವನ್ನು ಪ್ರವೇಶಿಸಿದ್ದಾರೆ.
ಮಾರಿಷಸ್‌ನ ಜಗದ್ಗುರು ಸಾಯಿ ಮಾತೆ ಲಕ್ಷ್ಮಿ ದೇವಿ ಕಳೆದ ಕೆಲವು ದಶಕಗಳಿಂದ ಹಿಂದೂ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ. ಮಹಾಕುಂಭಮೇಳದ ಸಮಯದಲ್ಲಿ, ಜಗದ್ಗುರು ಸಾಯಿ ಮಾತೆ ಲಕ್ಷ್ಮಿ ದೇವಿಯವರು ಪ್ರಯಾಗರಾಜ್‌ನ ಕುಂಭ ನಗರ ಸೆಕ್ಟರ್ 17 ರಲ್ಲಿರುವ ಶಕ್ತಿಧಾಮ ಆಶ್ರಮದಲ್ಲಿ ಉಪಸ್ಥಿತರಿದ್ದರು. ಈ ಕುಂಭಮೇಳ ಆರಂಭವಾದಾಗಿನಿಂದ, 200 ಕ್ಕೂ ಹೆಚ್ಚು ವಿದೇಶಿಯರು ಅವರ ಸಮ್ಮುಖದಲ್ಲಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ.
ಒಂದೇ ದಿನ 61 ವಿದೇಶಿಯರಿಗೆ ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿಯವರು ವೇದ ಮಂತ್ರಗಳನ್ನು ಪಠಿಸುವ ಮೂಲಕ ಸನಾತನ ಧರ್ಮದ ದೀಕ್ಷೆ ನೀಡಿದರು. ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿಗೆ ಜಪಾನ್, ಅಮೆರಿಕ, ಇಸ್ರೇಲ್ ಮತ್ತು ಫ್ರಾನ್ಸ್ ಸೇರಿದಂತೆ 12 ಕ್ಕೂ ಹೆಚ್ಚು ದೇಶಗಳಲ್ಲಿ ಶಿಷ್ಯರಿದ್ದಾರೆ. ಅವರೆಲ್ಲರೂ ಆಕೆಯ ಬೋಧನೆಗಳಿಂದ ಪ್ರಭಾವಿತರಾಗಿ ಸನಾತನ ಧರ್ಮಕ್ಕೆ ಮತಾಂತರಗೊಂಡರು.
ಜಗದ್ಗುರು ಸಾಯಿ ಮಾತೆ ಲಕ್ಷ್ಮಿ ದೇವಿಯ ಮೂಲಕ ಸನಾತನ ಧರ್ಮವನ್ನು ಸ್ವೀಕರಿಸಿದ ಪ್ರತಿಯೊಬ್ಬ ವಿದೇಶಿಯರ ಹಿನ್ನೆಲೆಯೂ ವಿಭಿನ್ನವಾಗಿದೆ. ಕೆಲವರು ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಕೆಲವರು ವೈದ್ಯರು, ಮತ್ತು ಕೆಲವರು ಮಾರ್ಕೆಟಿಂಗ್ ತಜ್ಞರು. ಅವರೆಲ್ಲರೂ ಉನ್ನತ ಶಿಕ್ಷಣ ಪಡೆದವರು. ವಿದೇಶಿಯರು ಹೇಳುವಂತೆ ಅವರು ಮಹಾ ಕುಂಭಮೇಳಕ್ಕೆ ಬಂದು ಹಿಂದೂ ಧರ್ಮದ ಬಗ್ಗೆ ವ್ಯಾಪಕ ಸಂಶೋಧನೆ ಮಾಡಿದ ನಂತರ ಸನಾತನ ಧರ್ಮವನ್ನು ಸ್ವೀಕರಿಸಿದರು.
ಸನಾತನ ಧರ್ಮವನ್ನು ಸ್ವೀಕರಿಸಿದವರಲ್ಲಿ ಆಸ್ಟಿಯೋಪತಿ ತಜ್ಞೆ ಕ್ಯಾಥರೀನ್ ಗಿಲ್ಡೆಮಿನ್ (ಬೆಲ್ಜಿಯಂ), ಮಾರಾಟ ಮತ್ತು ಮಾರುಕಟ್ಟೆ ತಜ್ಞ ಡೇವಿಡ್ ಹ್ಯಾರಿಂಗ್ಟನ್ (ಐರ್ಲೆಂಡ್), ಸಾಫ್ಟ್‌ವೇರ್ ಎಂಜಿನಿಯರ್ ಆಲಿವಿಯರ್ ಗಿಲ್ಲಿಯೇರಿ (ಫ್ರಾನ್ಸ್), ವಾಸ್ತುಶಿಲ್ಪಿ ಮ್ಯಾಥ್ಯೂ ಲಾರೆನ್ಸ್ (ಯುಎಸ್ಎ), ವೈದ್ಯ ಆಂಡ್ರೆ ಅನಾಟ್ (ಕೆನಡಾ), ಇಂಧನ ವಲಯದ ತಜ್ಞೆ ಜೆನ್ನಿ ಮಿಲ್ಲರ್ (ಯುಎಸ್ಎ), ಐಟಿ ಡೆವಲಪರ್ ಮ್ಯಾಥ್ಯೂ ಸವೊಯ್ (ಕೆನಡಾ), ಆರೋಗ್ಯ ಭದ್ರತಾ ಸಲಹೆಗಾರ ಕ್ರಿಸ್ಟೆಲ್ ಡಿ ಕಾಟ್ (ಬೆಲ್ಜಿಯಂ) ಮತ್ತು ಇತರರು ಇದ್ದಾರೆ ಎನ್ನಲಾಗಿದೆ.