

ಮುಂಬೈ: ವಾರ್ಷಿಕ 2 ಲಕ್ಷ ರೂ. ಆದಾಯ ಘೋಷಿಸಿಕೊಂಡಿರುವ ಮುಂಬೈ ಮೂಲದ 80 ವರ್ಷದ ವೃದ್ಧೆಯೊಬ್ಬರು ಸ್ವಿಸ್ ಬ್ಯಾಂಕ್‌ನಲ್ಲಿ 200 ಕೋಟಿ ರೂ. ಠೇವಣಿ ಹೊಂದಿದ್ದಾರೆ. ಇದೀಗ ಇವರಿಗೆ ಆದಾಯ ತೆರಿಗೆ ಇಲಾಖೆ ಪ್ರಾಂತೀಯ ಕಚೇರಿ ನೋಟಿಸ್ ನೀಡಿ ದಂಡ ವಿಧಿಸಿದೆ.
ತಾರಾನಿ ಕುಟುಂಬ ಟ್ರಸ್ಟ್ ಹೆಸರಿನಲ್ಲಿರುವ ಈ ಖಾತೆಗೆ ರೇಣು ತಾರಾನಿಯೊಬ್ಬರೇ ವಾರಸುದಾರರಾಗಿದ್ದಾರೆ. ಈ ಖಾತೆಯು 2004ರಲ್ಲಿ ಸೈಮನ್ ಐಲ್ಯಾಂಡ್ ಮೂಲದ ಜಿಡಬ್ಲ್ಯೂ ಇನ್ವೆಸ್ಟ್‌ಮೆಂಟ್‌ನಲ್ಲಿ ತೆರೆಯಲಾಗಿತ್ತು. ನಂತರ ತಾರಾನಿ ಕುಟುಂಬ ಟ್ರಸ್ಟ್ ಹೆಸರಿಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್: ಕೊನೆಗೂ ದುಬೈನಲ್ಲಿ ಸೆರೆ ಸಿಕ್ಕ ಫೈಸಲ್ ಫರೀದ್
2005-06ರ ಆದಾಯ ತೆರಿಗೆ ವಿವರ ಸಲ್ಲಿಕೆಯಲ್ಲಿ ರೇಣು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗೂ ತಮ್ಮ ವಾರ್ಷಿಕ ಆದಾಯವನ್ನು 1.70 ಲಕ್ಷ ರೂಪಾಯಿ ಎಂದೇ ತಿಳಿಸಿದ್ದರು, ಹಾಗೂ ತಾವು ಎನ್‌ಆರ್‌ಐ ಎಂದು ತಿಳಿಸಿದ್ದು, ಐಟಿ ಇಲಾಖೆಗೆ ಬೆಂಗಳೂರಿನ ವಿಳಾಸ ನೀಡಿದ್ದಾರೆ. ಆದರೆ ತಮಗೂ ಆ ಹಣಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.