20 ಪಶು ಆಸ್ಪತ್ರೆಗಳಿಗೆ ಪಾಲಿಕ್ಲಿನಿಕ್ ಭಾಗ್ಯ; ಸ್ಥಳ ಆಯ್ಕೆ ಮಾಡಿ ಆದೇಶಿಸಿದ ಸರ್ಕಾರ

Cattle
Published on

ಬೆಂಗಳೂರು: ತಾಲೂಕು ಮಟ್ಟದ 20 ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

2024-25ನೇ ಸಾಲಿನ ಬಜೆಟ್‌ನಲ್ಲಿ ೋಷಿಸಿರುವಂತೆ ಜಿಲ್ಲಾ ಹಂತದಲ್ಲಿರುವ ತಜ್ಞ ವೈದ್ಯಕೀಯ ಪಾಲಿ ಕ್ಲಿನಿಕ್‌ಗಳನ್ನು ತಾಲೂಕು ಹಂತಕ್ಕೆ ವಿಸ್ತರಿಸಲಾಗಿದೆ. ಪ್ರಥಮ ಹಂತದಲ್ಲಿ ರಾಜ್ಯದ 20 ತಾಲೂಕುಗಳಲ್ಲಿ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.

ಯಾವ,ಯಾವ ಸ್ಥಳ

ಬೆಟ್ಟದಪುರ(ಪಿರಿಯಾಪಟ್ಟಣ), ಎಚ್.ಡಿ.ಕೋಟೆ, ಕೆ.ಆರ್.ನಗರ, ಮಳವಳ್ಳಿ, ಕೊಳ್ಳೇಗಾಲ, ಕನಕಪುರ, ಮಧುಗಿರಿ, ಬೈಲಹೊಂಗಲ, ಚಿಕ್ಕೋಡಿ, ಹಿರೇಗಾಗೇವಾಡಿ, ಚಿತ್ತಾಪುರ, ಸಿಂಧನೂರು, ಮಂಕಿ(ಹೊನ್ನಾವರ), ಭದ್ರಾವತಿ, ಪುತ್ತೂರು, ರಾಣೇಬೆನ್ನೂರು, ಹಿರಿಯೂರು, ಗೌರಿಬಿದನೂರು, ಚನ್ನಗಿರಿ ಹಅಗೂ ಕುಕನೂರು ತಾಲೂಕು ಆಸ್ಪತ್ರೆಗಳಿಗೆ ಸರ್ಕಾರದ ಆದೇಶದಿಂದ ಪಾಲಿ ಕ್ಲಿನಿಕ್‌ಗಳಾಗುವ ಭಾಗ್ಯದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net