ಭಾರಿ ಮಳೆಗೆ ಆಂಧ್ರದಲ್ಲಿ 20 ಮಂದಿ ಮೃತ್ಯು

Rain flood loss.
Published on

ಅಮರಾವತಿ: ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಇದುವರೆಗೆ 20 ಮಂದಿ ಮೃತಪಟ್ಟಿದ್ದಾರೆ.

ಪ್ರವಾಹದಿಂದ ವಿಜಯವಾಡ ಮತ್ತಿತರ ಜಿಲ್ಲೆಗಳು ಅಕ್ಷರಷಃ ಮುಳುಗಡೆಯಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಎನ್ ಟಿಆರ್ ಜಿಲ್ಲೆಯಲ್ಲಿ 12 ಮಂದಿ, ಗುಂಟೂರು ಜಿಲ್ಲೆಯಲ್ಲಿ ಏಳು ಮಂದಿ ಹಾಗೂ ಪಲ್ನಾಡು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆಂಧ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ರಾಜ್ಯಾದ್ಯಂತ 1,69,370 ಎಕರೆ ಕೃಷಿ ಬೆಳೆ ಮತ್ತು 18,424 ಎಕರೆಯಲ್ಲಿ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. 60ಸಾವಿರ ಕೋಳಿ, 222 ಜಾನುವಾರು ಸಾವನ್ನಪ್ಪಿವೆ. ಮಳೆಯಿಂದ 3,312 ಕಿ.ಮೀ ರಸ್ತೆಗಳು ಹಾಳಾಗಿವೆ ಎಂದು ಸರ್ಕಾರ ಅಧಿಕೃತವಾಗಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net