ಶೇ. 20ರಷ್ಟು ಅತಿಶ್ರೀಮಂತರಿಗೆ ವಿದೇಶಕ್ಕೆ ವಲಸೆ ಹೋಗುವಾಸೆ! | ಖಾಸಗಿ ಕಂಪನಿ ಸಮೀಕ್ಷೆಯಿಂದ ಬಹಿರಂಗ

6-67e441882b9a7 (1)
Published on

ಮುಂಬೈ: ಐದನೇ ಒಂದರಷ್ಟು (ಶೇಕಡ 20ರಷ್ಟು) ಅತಿ ಶ್ರೀಮಂತರು ಅರ್ಥಾತ್ ಸೂಪರ್ ರಿಚ್ ಜನರು ಭಾರತದಿಂದ ಹೊರಹೋಗಿ ವಿದೇಶಗಳಲ್ಲಿ ನೆಲೆಸುವ ಆಸೆ ಹೊಂದಿದ್ದಾರೆ. ಭಾರತದಲ್ಲಿ ಇರುವುದಕ್ಕಿಂತ ಉತ್ತಮ ವಾತಾವರಣ ಮತ್ತು ಜೀವನಮಟ್ಟ ಹೊರದೇಶಗಳಲ್ಲಿ ಇದೆ ಎಂಬ ಭಾವನೆ ಇವರದಾಗಿದೆ ಎಂದು ಸಮೀಕ್ಷೆಯೊಂದು ಮಂಗಳವಾರ ತಿಳಿಸಿದೆ.

ಕೋಟಕ್ ಪ್ರೖೆವೇಟ್ ಎಂಬ ಖಾಸಗಿ ಸಂಸ್ಥೆಯು ಅರ್ನ್ಸ್್ಟ ಆಂಡ್ ಯಂಗ್ (ಇವೈ) ಜತೆ ಸೇರಿ, 150 ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಮೀಕ್ಷೆ ನಡೆಸಿದ್ದು, ಅವರಲ್ಲಿ ಬಹುತೇಕರು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಯುಎಇಗೆ ಹೋಗಿ ನೆಲೆಸಲು ಇಚ್ಛಿಸಿದ್ದಾರೆ ಎಂದು ಹೇಳಿದೆ. ಪ್ರತಿ ವರ್ಷ 25 ಲಕ್ಷ ಭಾರತೀಯರು ಬೇರೆ ದೇಶಗಳಿಗೆ ವಲಸೆ ಹೋಗುತ್ತಾರೆ. ಸಮೀಕ್ಷೆಗೆ ಪರಿಗಣಿಸಲಾಗಿದ್ದ ಅತಿ ಶ್ರೀಮಂತರಲ್ಲಿ ಶೇ. 20ರಷ್ಟು ಜನರು ಭಾರತದ ಪೌರತ್ವವನ್ನು ಉಳಿಸಿಕೊಂಡು ವಿದೇಶಗಳಲ್ಲಿ ಶಾಶ್ವತವಾಗಿ ನೆಲೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಲ್ಲಿ ಇರುವುದಕ್ಕಿಂತ ಉತ್ತಮ ಆರೋಗ್ಯಸೇವೆ, ಶಿಕ್ಷಣ, ಜೀವನಶೈಲಿ ತಮಗೆ ಬೇಕಾಗಿದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net