ಬಾಲಿವುಡ್​ ಅಂಗಳದಲ್ಲಿ ಸಮಂತಾ, ಕೀರ್ತಿ ಸುರೇಶ್​ಗೆ​ ಸೋಲು! ಕೈಹಿಡಿಯಲಿಲ್ಲ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳು | Flops

ವಿಜಯವಾಣಿ (23)
Published on

ಮುಂಬೈ: ದಕ್ಷಿಣ ಭಾರತದ ಸ್ಟಾರ್​ ಹೀರೋಯಿನ್​ಗಳು ತಮ್ಮ ಚಿತ್ರರಂಗದಲ್ಲಿ ಗುರುತಿಸಿಕೊಂಡ ಬಳಿಕ ಇತರೆ ಭಾಷೆಯ ಇಂಡಸ್ಟ್ರಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿರುವುದು ಹೊಸ ಬೆಳವಣಿಗೆಯನ್ನು ಸೂಚಿಸಿದೆ. ಅದರಲ್ಲೂ ವಿಶೇಷವಾಗಿ ಸೌತ್ ಬ್ಯೂಟಿಗಳು ಬಾಲಿವುಡ್​ ಅಂಗಳದಲ್ಲಿ ಸ್ಟಾರ್​ ಹೀರೋಗಳ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಗೆದ್ದವರ ಪೈಕಿ ಸೋತವರೆ (Flops) ಹೆಚ್ಚಾಗುತ್ತಿರುವುದು ಗಮನಾರ್ಹ.

ಇದೇ ಡಿಸೆಂಬರ್​ 25ರಂದು ಸೌತ್ ಬ್ಯೂಟಿ ಕೀರ್ತಿ ಸುರೇಶ್ ಮತ್ತು ಬಾಲಿವುಡ್​ ನಟ ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಬೇಬಿ ಜಾನ್'​ ಚಿತ್ರವು ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿದ್ದು, ಮೊದಲ ದಿನದಿಂದ ಇಂದಿನವರೆಗೂ ಪ್ರೇಕ್ಷಕರ ಗಮನಸೆಳೆಯುವಲ್ಲಿ ಹಿಂದುಳಿದಿದೆ. ಸದ್ಯ ಇದರಿಂದ ಚಿತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಹೂಡಿದ ಬಂಡವಾಳ ಎತ್ತುವುದೇ ಸದ್ಯ ಚಿತ್ರತಂಡದ ಮುಂದಿರುವ ಗುರಿಯಾಗಿದೆ. ಬಾಲಿವುಡ್​ನಲ್ಲಿ ತನ್ನ ಚೊಚ್ಚಲ ಸಿನಿಮಾ ಸೋಲು ಕಂಡಿರುವುದು ಇದೀಗ ಕೀರ್ತಿ ಸುರೇಶ್​ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.

ಮತ್ತೊಂದೆಡೆ ವರುಣ್ ಧವನ್ ಜತೆ 'ಸಿಟಾಡೆಲ್​ ಹನಿ ಬನ್ನಿ' ವೆಬ್​ ಸರಣಿಯಲ್ಲಿ ಕಾಣಿಸಿಕೊಂಡ ತೆಲುಗು ಚಿತ್ರರಂಗದ ಸ್ಟಾರ್​ ನಟಿ ಸಮಂತಾ ರುತು ಪ್ರಭು, ಈ ಬಿಗ್ ಪ್ರಾಜೆಕ್ಟ್​ನಲ್ಲಿ ಹೀನಾಯ ಸೋಲು ಕಂಡರು. ತನ್ನ ಮಾರ್ಕೆಟ್​ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಭಾರೀ ಶ್ರಮವಹಿಸಿ ಈ ಎರಡು ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡಿದ್ದ ವರುಣ್​ ಧವನ್​ಗೂ​ ಸಿಕ್ಕಿದ್ದು ಸೋಲು. ಇದು ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಈ ಎರಡು ಭರವಸೆಯ ಪ್ರಾಜೆಕ್ಟ್​ಗಳು ವರುಣ್​ಗೆ ಸೋಲು ಉಣಿಸಿದರೆ, ಸಮಂತಾ ಹಾಗೂ ಕೀರ್ತಿಗೂ ಕಹಿ ಅನುಭವ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net