ರೈಲಿನಲ್ಲಿ ಮದ್ಯ ಮಾರಾಟ!: 11 ಬಾಟಲಿ, 1.38 ಲಕ್ಷ ರೂ. ನಗದು ಪತ್ತೆ

Untitled design - 2023-09-15T112150.360
Published on

ಪ್ರಯಾಗರಾಜ್: ರೈಲಿನಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಇಬ್ಬರು ರೈಲ್ವೆ ಟಿಟಿಇಗಳ ವಿರುದ್ಧ ತನಿಖೆ ನಡೆಸಿದ ವಿಜಿಲೆನ್ಸ್ ತಂಡವು, ದಾಳಿಯಲ್ಲಿ 11 ಬಾಟಲಿ ಮತ್ತು 1.38 ಲಕ್ಷ ರೂ. ನಗದು ಪತ್ತೆಹಚ್ಚಿದೆ.

ಭ್ರಷ್ಟಾಚಾರ ವಿರೋಧಿ ದಾಳಿಯ ವೇಳೆ ವಿಜಿಲೆನ್ಸ್ ತಂಡವು ಮದ್ಯದ ಬಾಟಲಿಗಳು ಮತ್ತು ನಗದು ಹಣವನ್ನು ಪತ್ತೆ ಮಾಡಿದ ನಂತರ ಪ್ರಯಾಗರಾಜ್‌ನ ಇಬ್ಬರು ರೈಲ್ವೆ ಟಿಟಿಇಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ.

ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿಜಿಲೆನ್ಸ್ ಅಧಿಕಾರಿಗಳ ತಂಡ ದಾಳಿ ನಡೆಸಿದ ಕೆಲವು ದಿನಗಳ ನಂತರ ಟಿಟಿಇ ಆರ್‌.ಕೆ. ಯಾದವ್ ಮತ್ತು ರಾಮ್ ಲಖನ್ ಅವರನ್ನು ಅಮಾನತುಗೊಳಿಸಿದ್ದು, ಸದ್ಯ ವಿಜಿಲೆನ್ಸ್ ವರದಿ ಆಧರಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇಬ್ಬರೂ ಟಿಟಿಇಗಳನ್ನು ರೈಲಿನಲ್ಲಿ ನಿಯೋಜಿಸಲಾಗಿತ್ತು. ಟಿಕೆಟ್ ಚೆಕ್ ಮಾಡುವ ಅಧಿಕಾರಿಗಳ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಈ ಕ್ರಮ ಕೈಗೊಂಡಿದೆ. ವಿಜಿಲೆನ್ಸ್ ತಂಡವು ಪ್ರಯಾಗರಾಜ್‌ನಲ್ಲಿ ಅಧಿಕಾರಿಗಳ ವಸ್ತುಗಳನ್ನು ಪರಿಶೀಲಿಸಿದಾಗ 11 ಮದ್ಯದ ಬಾಟಲಿ ಮತ್ತು 1,38,000 ರೂ. ಹಣವನ್ನು ಪತ್ತೆಹಚ್ಚಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net