ದೆಹಲಿ ವಿಮಾನ ನಿಲ್ದಾಣದಲ್ಲಿ ‘ಪರಮಾಣು ಬಾಂಬ್’ ಬೆದರಿಕೆ! ಇಬ್ಬರು ಪ್ರಯಾಣಿಕರ ಬಂಧನ

WhatsApp-Image-2024-04-08-at-12.43.00-PM
Published on

ನವದೆಹಲಿ: ಕಳೆದ ವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರಮಾಣು ಬಾಂಬ್ ಬೆದರಿಕೆ ಹಾಕುವುದಾಗಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿಗಳಿಗೆ ಹೇಳಿ ಹೋಗಿದ್ದ ಇಬ್ಬರು ಪ್ರಯಾಣಿಕರನ್ನು ಇದೀಗ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಯಾಣಿಕರನ್ನು ಜಿಗ್ನೇಶ್ ಮಲನ್ ಮತ್ತು ಕಶ್ಯಪ್ ಕುಮಾರ್ ಲಲಾನಿ ಎಂದು ತಿಳಿಸಲಾಗಿದ್ದು, ಭದ್ರತಾ ತಪಾಸಣೆಯ ಅಗತ್ಯವೇನು ಎಂದು ಸಿಬ್ಬಂದಿಗಳಿಗೆ ಅವಾಜ್ ಹಾಕಿದ್ದರು. ಈ ಘಟನೆ ಏಪ್ರಿಲ್ 5ರಂದು ಅಹಮದಾಬಾದ್‌ಗೆ ಆಕಾಶ್​ ಏರ್ ವಿಮಾನವನ್ನು ಹತ್ತುವ ಮೊದಲು ಅವರನ್ನು ಪರಿಶೀಲಿಸುವ ವೇಳೆ ನಡೆದಿತ್ತು ಎಂದು ವರದಿ ಉಲ್ಲೇಖಿಸಿದೆ. ಸಿಬ್ಬಂದಿ ಭದ್ರತಾ ಪ್ರೋಟೋಕಾಲ್ ವಿವರಿಸಲು ಪ್ರಯತ್ನಿಸಿದರೂ, ಅವರಲ್ಲಿ ಒಬ್ಬರು ಅಣು ಬಾಂಬ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದ ಎಂಬುದು ತಿಳಿದುಬಂದಿದೆ.

ಘಟನೆ ನಡೆದ ಬಳಿಕ ಎಲ್ಲಾ ಪ್ರಯಾಣಿಕರಿಗು ವಿಮಾನದ ಸುರಕ್ಷತೆ ಖಚಿತಪಡಿಸಿಕೊಳ್ಳಲು ತಿಳಿಸಿದ ಸಿಬ್ಬಂದಿಗಳು ಈ ಇಬ್ಬರು ಪ್ರಯಾಣಿಕರಿಗೆ ವಿಮಾನ ಪ್ರವೇಶಿಸಲು ಅನುಮತಿಸಲಿಲ್ಲ. ದೂರು ಮತ್ತು ನಂತರದ ವಿಚಾರಣೆಯ ಆಧಾರದ ಮೇಲೆ ಏಪ್ರಿಲ್ 5ರಂದು ಇಬ್ಬರ ಮೇಲೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 182 ಮತ್ತು 505 (1) (b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ವಿಷಯ ತಡವಾಗಿ ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net