ಬಾಂಗ್ಲಾ ಗಡಿಯಲ್ಲಿ ಮ್ಯಾಪ್ ಹಿಡ್ಕೊಂಡು ಸಂದೇಹಾಸ್ಪದವಾಗಿ ಅಡ್ಡಾಡುತ್ತಿದ್ದವರ ಬಂಧನ

BSF
Published on

ಕೋಲ್ಕತ: ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಜಿಲ್ಲೆಯ ಬಾಂಗ್ಲಾ ಗಡಿ ಭಾಗದಲ್ಲಿ ಭೂಪಟವನ್ನು ಹಿಡ್ಕೊಂಡು ಸಂದೇಹಾಸ್ಪದವಾಗಿ ಅಡ್ಡಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್​ಎಫ್) ತಿಳಿಸಿದೆ.

ಬಂಧಿತರ ಬಳಿಕ ಸುಮಾರು 500ರಷ್ಟು ಯಾಬಾ ಟ್ಯಾಬ್ಲೆಟ್ಸ್, ಮ್ಯಾಪ್ ಮತ್ತು ಇತರೆ ವಸ್ತುಗಳು ಸಿಕ್ಕಿವೆ. ಯಾಬಾ ಟ್ಯಾಬ್ಲೆಟ್ಸ್ ನಿಷೇಧಿತ ಡ್ರಗ್ಸ್ ಪಟ್ಟಿಯಲ್ಲಿದೆ. ಗಸ್ತಿನಲ್ಲಿದ್ದ ಬಿಎಸ್​ಎಫ್ ಯೋಧರ ತಂಡಕ್ಕೆ ಇವರು ಎದುರಾಗಿದ್ದು, ಸಂದೇಹಾಸ್ಪದ ನಡವಳಿಕೆ ತೋರಿದ್ದರಿಂದ ತಡೆದು ತಪಾಸಣೆ ನಡೆಸಲಾಗಿತ್ತು. ಅವರ ಬಳಿ ಇದ್ದ ಬೈಕ್ ಅನ್ನೂ ವಶಪಡಿಸಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 3.26 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತರನ್ನು ರುಹುಲ್ ಮೊಂಡಲ್​, ಫಾರೂಕ್​ ಮೊಲ್ಲಾಹ್ ಎಂದು ಗುರುತಿಸಲಾಗಿದೆ. ಇಬ್ಬರೂ ನಾರ್ತ್ 24 ಪರಗಣ ಜಿಲ್ಲೆಯ ಸ್ವರೂಪ್​ನಗರದ ನಿವಾಸಿಗಳು. ವಿಚಾರಣೆ ವೇಳೆ, ಸ್ಥಳೀಯರೊಬ್ಬರು ತಮ್ಮನ್ನು ಅಲ್ಲಿ ನಿಲ್ಲುವಂತೆ ಸೂಚಿಸಿದ್ದರಿಂದ ನಿಂತಿದ್ದೇವೆ ಎಂದು ಹೇಳಿದ್ದರು. ಆ ಸ್ಥಳೀಯ ವ್ಯಕ್ತಿ ಯಾರು ಎಂಬ ಶೋಧಕ್ಕೆ ಇಳಿದಿದ್ದಾರೆ ಬಿಎಸ್​ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net