ನೌಕಾಪಡೆ ಗ್ಲೈಡರ್ ಪತನ; ಇಬ್ಬರು ಅಧಿಕಾರಿಗಳ ಮರಣ

Navy
Published on

ಕೊಚ್ಚಿ: ನೌಕಾಪಡೆಗೆ ಸೇರಿದ ಗ್ಲೈಡರ್ (ಎಂಜಿನ್​ ಅವಲಂಬಿಸಿರದ, ಗಾಳಿಯಲ್ಲಿ ಹಾರುವ ಒಂದು ಯಂತ್ರ)​ ಪತನವಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟ ದುರ್ಘಟನೆ ಇಂದು ಮುಂಜಾನೆ 7 ಗಂಟೆ ಹೊತ್ತಿಗೆ ತೊಪ್ಪಂಪಡಿ ಸೇತುವೆ ಬಳಿ ನಡೆದಿದೆ.

ನೌಕಾಪಡೆ ಲೆಫ್ಟಿನೆಂಟ್​ ರಾಜೀವ್ ಝಾ (39) ಮತ್ತು ಅವರ ಅಧೀನ ಅಧಿಕಾರಿ ಸುನೀಲ್​ ಕುಮಾರ್​ (29) ಮೃತರು. ಇವರಿಬ್ಬರೂ ಗ್ಲೈಡರ್​​ನಲ್ಲಿ ಇದ್ದರು. ಗ್ಲೈಡರ್​ ಪತನವಾಗುತ್ತಿದ್ದಂತೆ ಕೆಳಗೆ ಬಿದ್ದ ಇವರಿಬ್ಬರನ್ನೂ ಐಎನ್​​ಎಚ್​​ಎಸ್​ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಅತ್ಯಾಚಾರ ಆರೋಪ: ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನ ಬಂಧನ; ಬಂದೂಕು​ ಗುರಿ ಇಟ್ಟು ರೇಪ್​?

ಸಣ್ಣ ವಿಮಾನವಾಗಿರುವ ಗ್ಲೈಡರ್​​ನ್ನು ತರಬೇತಿಗಾಗಿ ಬಳಸಲಾಗುತ್ತದೆ. ಈ ಗ್ಲೈಡರ್​ ಐಎನ್​ಎಸ್​ ಗರುಡಾ ನೌಕನೆಲೆಯಿಂದ ಹೊರಟಿತ್ತು. ಗ್ಲೈಡರ್​ ಪತನವಾದರೂ ಅಧಿಕಾರಿಗಳನ್ನಿಬ್ಬರನ್ನು ರಕ್ಷಣೆ ಮಾಡುವಲ್ಲಿ ತುಂಬ ವಿಳಂಬ ಆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ತನಿಖೆಗೆ ಆದೇಶ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net