ಹಳಿ ತಪ್ಪಿದ ರೈಲು; ಇಬ್ಬರು ಸಾವು, 20 ಜನರಿಗೆ ಗಾಯ

2 killed and 20 people injured as Mumbai Howrah Mail train accident in Jharkhand
Published on

ಜಾರ್ಖಂಡ: ಹೌರ-ಮುಂಬೈ ಮೇಲ್ ರೈಲು ಹಳಿ ತಪ್ಪಿದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು, 20 ಜನರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಸೆರೆಕೇಲಾ-ಖಾರ್ಸವನ್ ಜಿಲ್ಲೆಗಳ ಗಡಿ ಭಾಗದಲ್ಲಿ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡದ ಆಗ್ನೇಯ ರೈಲು ವಿಭಾಗದ ಚಕ್ರಧರಪುರ ವ್ಯಾಪ್ತಿಯ ಬರಬಾಂಬೂರಿನಲ್ಲಿ ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ಎನ್​ಡಿಆರ್​ಎಫ್ ಧಾವಿಸಿದ್ದು, ರಕ್ಷಣೆ ಕಾರ್ಯಚಾರಣೆ ನಡೆಯುತ್ತಿದೆ.

ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಈ ಹಿಂದೆ ರಾಜ್‌ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಬಾರಾಬಾಂಬು ನಡುವೆ ಗೂಡ್ಸ್ ರೈಲು ಹಳಿತಪ್ಪಿತ್ತು, ಅದರ ವ್ಯಾಗನ್‌ಗಳು ಇನ್ನೂ ಟ್ರ್ಯಾಕ್‌ನಲ್ಲಿದ್ದವು. ಹೌರಾ-ಮುಂಬೈ ಮೇಲ್ ಮತ್ತೊಂದು ಟ್ರ್ಯಾಕ್‌ನಿಂದ ಬರುತ್ತಿತ್ತು ಮತ್ತು ಆ ವ್ಯಾಗನ್‌ಗಳಿಗೆ ಡಿಕ್ಕಿ ಹೊಡೆದ ನಂತರ ಅದರ ಬೋಗಿಗಳೂ ಹಳಿತಪ್ಪಿದವು.

ಅಧಿಕಾಗಳು ಹೇಳುವ ಪ್ರಕಾರ, ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ ಈ ಘಟನೆಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ,

ಈ ಭಿಕರ ಅಪಘಾತದ ಕುರಿತಾಗಿ ಕುರಿತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೆನ್ ತಮ್ಮ 'ಎಕ್ಸ್' ಖಾತೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಪರಿಹಾರ ಕಾರ್ಯಗಳು ತ್ವರಿತಗೊಳಿಸಿ, ಗಾಯಗೊಂಡವರಿಗೆ ಸಹಾಯ ಮಾಡಿ ಸೂಕ್ತವಾದಿ ಚಿಕಿತ್ಸೆ ಸಿಗುವ ವ್ಯವಸ್ಥೆ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಘಟನೆ ಪರಿಣಾಮ ಹಲವು ರೈಲುಗಳು ರದ್ದು: ಈ ಘಟನೆ ಸಂಬಂಧಿಸಿದಂತೆ ಇದೇ ಮಾರ್ಗದಲ್ಲಿ ಪ್ರಯಾಣಿಸುವ 22861 ಹೌರ-ಟಿಟ್ಲಾಘರ್, ಕಾಂತಬಾಂಜಿ ಇಸ್ಪಾತ್ ಎಕ್ಸ್​ಪ್ರೆಸ್,12021 ಹೌರ -ಬಾರ್ಬಿಲ್​ಜನಶತಾಬ್ದಿ ಎಕ್ಸ್​ಪ್ರೆಸ್ ಸೇರಿದಂತೆ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net