ಸಿಂಗಾಪುರದಿಂದ ಕೆಐಎಗೆ ಬಂದಿಳಿದ ಪ್ರಯಾಣಿಕರ ಬೆಲ್ಟ್‌ನಲ್ಲಿ 2 ಕೆಜಿ 610 ಗ್ರಾಂ ಚಿನ್ನ ಪತ್ತೆ

Gold KIA
Published on

ಬೆಂಗಳೂರು: ಸಿಂಗಾಪುರದಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎ) ಬಂದಿಳಿದ ಇಬ್ಬರು ಪ್ರಯಾಣಿಕರ ಬೆಲ್ಟ್‌ನಲ್ಲಿ 2 ಕೆಜಿ 610 ಗ್ರಾಂ ಚಿನ್ನದ ಸರ ಪತ್ತೆಯಾಗಿವೆ.

ಬಂಧಿತರು ಸ್ಥಳೀಯರಾಗಿದ್ದು, ಜುಲೈ 24ರಂದು ಸಿಂಗಾಪುರದಿಂದ ವಿಮಾನದಲ್ಲಿ ಕೆಐಎಗೆ ಬಂದು ಇಳಿದರು. ಖಚಿತ ಮಾಹಿತಿ ಮೇರೆಗೆ ಏರ್‌ಪೋರ್ಟ್ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕರನ್ನು ಸ್ಕಾೃನರ್‌ನಲ್ಲಿ ತಪಾಸಣೆ ನಡೆಸಿದಾಗ ಸಿಂಥೆಟಿಕ್ ಬೆಲ್ಟ್‌ನಲ್ಲಿ ಲೋಹ ಇರುವುದು ಪತ್ತೆಯಾಗಿದೆ.

ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು ಬೆಲ್ಟ್ ಪರಿಶೀಲನೆ ನಡೆಸಿದಾಗ 2 ಕೆಜಿ 610 ಗ್ರಾಂ ಚಿನ್ನದ ಸರ ಪತ್ತೆಯಾಗಿದೆ. ಆರೋಪಿತರು ಕಳ್ಳ ಮಾರ್ಗದಲ್ಲಿ ಬೆಲ್ಟ್‌ನಲ್ಲಿ ಚಿನ್ನ ಬಚ್ಚಿಟ್ಟುಕೊಂಡು ತಂದಿದ್ದರು.

ಪ್ರಯಾಣಿಕರನ್ನು ಬಂಧಿಸಿ ಚಿನ್ನದ ಸರ ಜಪ್ತಿ ಮಾಡಲಾಗಿದ್ದು, ಇದರ ಮೌಲ್ಯ 1.59 ಕೋಟಿ ರೂ. ಅಂದಾಜು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net