2ನೇ ಹಂತದ ಕರೊನಾ ಲಸಿಕೆ : ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅರ್ಚನಾ ಮನವಿ

01-03-rama-Lasike
Published on

ರಾಮನಗರ : ಜಿಲ್ಲೆಯಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಸೋಮವಾರದಿಂದ ಆರಂಭವಾಗಿದ್ದು, ಸಾರ್ವಜನಿಕರು ಇದರು ಉಪಯೋಗ ಪಡೆದುಕೊಳ್ಳುವಂತೆೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, 45 ವರ್ಷ ಮೇಲ್ಪಟ್ಟವರು 59 ವರ್ಷದೊಳಗಿನವರು ಕೊಮೊರ್ಬಿಡಿಟಿ ಕಾಯಿಲೆಯಿಂದ ಬಳಲುತ್ತಿದ್ದರೆ ಅವರು ಸಹ ಆರ್‌ಎಂಪಿ ವೈದ್ಯರಿಂದ ಕಾಯಿಲೆ ಇರುವ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.

ಲಸಿಕೆ ದೊರೆಯುವ ಸ್ಥಳಗಳು: ಸಾರ್ವಜನಿಕ ರಜೆ ಹೊರತುಪಡಿಸಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿಕೊಂಡು ಉಚಿತವಾಗಿ ಲಸಿಕೆ ಪಡೆಯಬಹುದು. ಖಾಸಗೆ ಆಸ್ಪತ್ರೆಗಳಾದ ರಾಮಕೃಷ್ಣ ಆಸ್ಪತ್ರೆ ಹಾಗೂ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಪ್ರತಿ ಡೋಸ್‌ಗೆ 250 ರೂ. ಪಾವತಿಸಿ ಲಸಿಕೆ ಪಡೆಯಬಹುದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net