ಕಾನ್ಪುರ: ವಿವಾದಿತ ಜಮೀನಿನಲ್ಲಿ ವಾಹನ ನಿಲ್ಲಿಸಿದ್ದಕ್ಕಾಗಿ ಇಬ್ಬರು ಸಹೋದರರನ್ನು ಹೊಡೆದು ಕೊಂದ ಕುಟುಂಬಸ್ಥರು..!

111
Published on

ಉತ್ತರಪ್ರದೇಶ ಕಾನ್ಪುರದ ದೆಹತ್‌ನಲ್ಲಿ ವಿವಾದಿತ ಜಮೀನಿನಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಇಬ್ಬರು ಸಹೋದರರನ್ನು ಹೊಡೆದು ಸಾಯಿಸಿದ ಘಟನೆ ನಡೆದಿದೆ. ಮಹಿಳೆಯರು ಸೇರಿದಂತೆ ನಾಲ್ವರು ಕುಟುಂಬ ಸದಸ್ಯರು ಗಂಭೀರವಾಗಿ ಗಾಯಗೊಂಡಿರೋದಾಗಿ ಪೊಲೀಸರು ತಿಳಿಸಿದ್ದಾರೆ.


ಸಂತ್ರಸ್ತರನ್ನು ರಾಮ್‌ಬೀರ್ ಮತ್ತು ಸತ್ನಾರಾಯಣ್ ಎಂದು ಗುರುತಿಸಲಾಗಿದ್ದು, ಅದೇ ಗ್ರಾಮದ ಮೋಹನ್‌ಲಾಲ್ ಅವರು ತಮ್ಮದು ಎಂದು ಹೇಳಿಕೊಂಡ ಭೂಮಿಯನ್ನು ದೀರ್ಘಕಾಲದಿಂದ ಹೊಂದಿದ್ದರು. ಸ್ಥಳೀಯರ ಪ್ರಕಾರ, ಸತ್ನಾರಾಯಣ್ ಅವರು ಶಂಕರ್ ಬಾನಿಯಿಂದ ಭೂಮಿಯನ್ನು ಬಾಯಿಮಾತಿನಿಂದ ಖರೀದಿಸಿದ್ದಾರೆ. ಅದಕ್ಕೆ ಯಾವುದೇ ದಾಖಲಾತಿಗಳಿಲ್ಲ. ಅವರು ಅದನ್ನು ಮೋಹನ್ ಲಾಲ್ ಅವರ ಅಜ್ಜ ರಾಜೋಲಾ ಶುಕ್ಲಾ ಅವರಿಂದ ಮೌಖಿಕವಾಗಿ ಖರೀದಿಸಿದ್ದರು.


ಆದರೆ, ಈ ವ್ಯವಹಾರಗಳಲ್ಲಿ ಯಾವುದೇ ದಾಖಲೆಗಳನ್ನು ಮಾಡಲಾಗಿಲ್ಲ ಮತ್ತು ಅಧಿಕೃತ ದಾಖಲೆಗಳಲ್ಲಿ ಭೂಮಿಯನ್ನು ಮೋಹನ್‌ಲಾಲ್ ಅವರ ತಾತನ ಹೆಸರಿಗೆ ನೋಂದಾಯಿಸಲಾಗಿದೆ.


ಮೋಹನ್ ಲಾಲ್ ನಂತರ ತನ್ನ ತಂದೆ ಪ್ರೇಮ್ ನಾರಾಯಣ್ ಮತ್ತು ಚಿಕ್ಕಪ್ಪ ಉದಯ್ ನಾರಾಯಣ್ ಅವರೊಂದಿಗೆ ಮಾರಾಟಕ್ಕೆ ಸಹಿ ಹಾಕಿದರು ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಸೆ.30ರಂದು ವಿವಾದಿತ ಜಮೀನಿನಲ್ಲಿ ಅಕ್ರಮ ಒತ್ತುವರಿ ಹಾಗೂ ನಿರ್ಮಾಣದ ವಿರುದ್ಧ ದೂರು ದಾಖಲಿಸಿದ್ದರು.


ಮೋಹನ್​​​ಲಾಲ್​ ತಮ್ಮ ದೂರಿನ ಬಗ್ಗೆ ಯಾವುದೇ ಪೊಲೀಸ್ ಕ್ರಮ ಕೈಗೊಂಡಿಲ್ಲ ಎಂದು ಮೋಹನ್ ಲಾಲ್ ತಮ್ಮ ದೂರಿನ ಪತ್ರದಲ್ಲಿ ಆರೋಪಿಸಿದ್ದಾರೆ. ಇನ್ನು ವಿವಾದಿತ ಜಾಗದಲ್ಲಿ ಪಿಕ್​​ ಅಪ್​ ಒಂದನ್ನ ನಿಲ್ಲಿಸುವ ವಿಚಾರಕ್ಕೆ ಗಲಾಟೆ ಪ್ರಾರಂಭವಾಗಿದ್ದು, ಮಾರಾಮಾರಿ ನಡೆದ ನಂತರ ಗುರುವಾರ ಡಬಲ್ ಮರ್ಡರ್ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net