ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ಪೊಲೀಸ್ ಅಧಿಕಾರಿ ಹುತಾತ್ಮ

Army (4)
Published on

ಶ್ರೀನಗರ: ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರ ಜತೆಗೆ ಒಬ್ಬ ಪೊಲೀಸ್ ಕೂಡ ಹುತಾತ್ಮರಾಗಿರುವ ಪ್ರಕರಣ ನಡೆದಿದೆ. ಜಮ್ಮು-ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಯೋಧರಾದ ಕರ್ನಲ್ ಮನ್​ಪ್ರೀತ್ ಸಿಂಗ್ ಹಾಗೂ ಮೇಜರ್ ಆಶಿಸ್​ ಧೊಂಚಕ್ ಮತ್ತು ಡಿವೈಎಸ್​ಪಿ ಹಿಮಾನ್ಯುಂ ಮುಜಾಮಿಲ್ ಭಟ್ ಹುತಾತ್ಮರಾದವರು. ಮನ್​ಪ್ರೀತ್ ಸಿಂಗ್ ರಾಜಸ್ಥಾನ್​ ರೈಫಲ್ಸ್ ಸಂಘಟನೆಯ ಕಮಾಂಡಿಂಗ್ ಆಫೀಸರ್.

ಅನಂತ್​ನಾಗ್​ನ ದಟ್ಟ ಕಾಡಿನಲ್ಲಿ ಉಗ್ರರ ಗುಂಡಿನ ದಾಳಿಯ ನಡುವೆಯೂ ಪೊಲೀಸ್ ಅಧಿಕಾರಿಯ ಶವವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಉಗ್ರರ ನುಸುಳಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸೇನೆ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಇಬ್ಬರು ಉಗ್ರರು ಕೂಡ ಹತರಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net