ನಿವೃತ್ತ ಅಧಿಕಾರಿಗೆ 2.50 ಕೋಟಿ ರೂ. ಧೋಖಾ

Cyber Attack
Published on

ಬೆಂಗಳೂರು: ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ನಿವೃತ್ತ ಅಧಿಕಾರಿಗೆ ಆಮಿಷವೊಡ್ಡಿ ಸೈಬರ್ ಕಳ್ಳರು 2.50 ಕೋಟಿ ರೂ. ವಂಚನೆ ಮಾಡಿದ್ದಾರೆ.

ಜಯನಗರ 5ನೇ ಹಂತದಲ್ಲಿ ವಾಸವಾಗಿರುವ ನಿವೃತ್ತ ಅಧಿಕಾರಿಗೆ ೆ. 26ರಂದು ಯೂಟ್ಯೂಬ್‌ನಲ್ಲಿ ಲಿಂಕ್ ಬಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದಾಗ ಇವರ ಮೊಬೈಲ್ ನಂಬರ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಜಾಯಿನ್ ಆಗಿತ್ತು. ಅದರಲ್ಲಿ 200ರಿಂದ 250 ಮಂದಿ ಗ್ರೂಪ್‌ನಲ್ಲಿದ್ದು, ಆದಿತ್ಯ ಬಸಲ್ ಮತ್ತು ಮೆಹರ್ ಭಾಟಿಯಾ ಎಂಬ ಮೆಂಟರ್‌ಗಳಿದ್ದರು.

ಇಬ್ಬರೂ ಷೇರು ಮಾರ್ಕೆಟ್ ಬಗ್ಗೆ ತರಬೇತಿ ನೀಡಿದ್ದರು. ನಂತರ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಮೆಂಟರ್‌ಗಳು ಆಮಿಷವೊಡ್ಡಿದ್ದರು. ಅದನ್ನು ನಂಬಿದ ನಿವೃತ್ತ ಅಧಿಕಾರಿ ಹಂತ ಹಂತವಾಗಿ 2.50 ಕೋಟಿ ರೂ. ತೊಡಗಿಸಿದ್ದರು. ಆದರೆ ಇತ್ತೀಚೆಗೆ ಲಾಭಾಂಶ ವಿತ್ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಮೆಂಟರ್‌ಗಳನ್ನು ಪ್ರಶ್ನೆ ಮಾಡಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದರು.

ನಿವೃತ್ತ ಅಧಿಕಾರಿಗೆ ಸೈಬರ್ ವಂಚನೆ ಎಂಬುದು ಗೊತ್ತಾಗಿ ದಕ್ಷಿಣ ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net