

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ.2.25 ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ತನ್ನ ನೌಕರರ ಡಿಎ ಹೆಚ್ಚಳ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಸಹ ಹೆಚ್ಚಳ ಮಾಡಿದೆ.
2024ರ ಆಗಸ್ಟ್ 1ರಿಂದಲೇ ಆರ್ಥಿಕ ಲಾಭ ನೌಕರರಿಗೆ ಪೂರ್ವಾನ್ವಯವಾಗಿ ಸಿಗಲಿದೆ. ನೌಕರರ ಮೂಲವೇತನ ಶೇ.8.50ರಿಂದ ಶೇ.10.75ಕ್ಕೆ ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಹಾಲಿ ಹಾಗೂ ನಿವೃತ್ತ ನೌಕರರಿಗೆ ಇದರ ಲಾಭ ಲಭ್ಯವಾಗಲಿದ್ದು, ಸರ್ಕಾರಕ್ಕೆ ಹೆಚ್ಚುವರಿ ಒಂದು ಸಾವಿರ ಕೋಟಿ ರೂ. ಹೊರೆ ಬೀಳಲಿದೆ.