ರಾಜ್ಯದಲ್ಲಿ ಇಂದು 1925 ಹೊಸ ಕರೊನಾ ಪ್ರಕರಣಗಳು; 37 ಮಂದಿ ಸಾವು

Coronavirus 5 Jul 20
Published on

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 1925 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟೂ ಸೋಂಕಿತರ ಸಂಖ್ಯೆ 23,474ಕ್ಕೆ ಏರಿದೆ.

ಕಳೆದ 24ಗಂಟೆಯಲ್ಲಿ ಒಟ್ಟು 603 ಮಂದಿ ಸೋಂಕಿನಿಂದ ಮುಕ್ತರಾಗಿ, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9,847ರಷ್ಟಾಗಿದೆ. ಇಂದು ಒಟ್ಟು 37 ಮಂದಿ ಕೊವಿಡ್​-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಸಾವಿನ ಸಂಖ್ಯೆ 372ಕ್ಕೆ ಏರಿದೆ. ರಾಜ್ಯದಲ್ಲಿ ಒಟ್ಟು ಕರೊನಾ ಸಕ್ರಿಯ ಪ್ರಕರಣಗಳು 13,251 ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಇಂದೂ ಕೂಡ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಒಟ್ಟು 1235 ಜನರಲ್ಲಿ ಸೋಂಕು ದೃಢಪಟ್ಟಿದೆ. ನಂತರ ದಕ್ಷಿಣ ಕನ್ನಡದಲ್ಲಿ 147 ಮಂದಿ ಸೋಂಕಿತರರು ಪತ್ತೆಯಾಗಿದ್ದಾರೆ. ಉಳಿದಂತೆ ಬಳ್ಳಾರಿಯಲ್ಲಿ 90, ವಿಜಯಪುರ-51, ಕಲಬುರಗಿ-49, ಉಡುಪಿ, ಧಾರವಾಡ ತಲಾ 45, ಬೀದರ್​-29, ಮೈಸೂರು-25, ಕೊಪ್ಪಳ-22, ಉತ್ತರ ಕನ್ನಡ-21, ಚಾಮರಾಜನಗರ- 19, ಹಾವೇರಿ-15, ಹಾಸನ-14, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ತಲಾ 13, ಬೆಳಗಾವಿ, ದಾವಣಗೆರೆ ತಲಾ 11, ರಾಯಚೂರು, ಮಂಡ್ಯ ತಲಾ 10, ಚಿಕ್ಕಮಗಳೂರು-9, ಶಿವಮೊಗ್ಗ-8, ಗದಗ-7, ರಾಮನಗರ-6, ಬಾಗಲಕೋಟೆ-4, ಚಿತ್ರದುರ್ಗದಲ್ಲಿ ಮೂರು ಕರೊನಾ ಪ್ರಕರಣಗಳು ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net