ಕರೊನಾಗೆ ನ್ಯೂಯಾರ್ಕ್​ನಲ್ಲಿ 1,900 ಸಾವು

Corona
Published on

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್​ನಲ್ಲಿ ಕಳೆದ 72 ತಾಸಿನ ಅವಧಿಯಲ್ಲಿ 1,900ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. ದೇಶದಲ್ಲಿ 24 ತಾಸಿನಲ್ಲಿ 358 ಮಂದಿ ಮೃತರಾಗಿದ್ದು, ಸತ್ತವರ ಒಟ್ಟು ಸಂಖ್ಯೆ 5,113 ಆಗಿದೆ.

ನ್ಯೂ ಓರ್ಲಿಯನ್ಸ್, ಕ್ಯಾಲಿಫೋರ್ನಿಯಾ ದಕ್ಷಿಣದ ಭಾಗಗಳು ಕರೊನಾ ವೈರಸ್​ನ ಹಾಟ್​ಸ್ಪಾಟ್​ಗಳಾಗಿವೆ. ಆಸ್ಪತ್ರೆಗಳ ಶವಾಗಾರಗಳಲ್ಲಿ ಶವಗಳನ್ನು ಇರಿಸಲು ಸ್ಥಳವಿಲ್ಲದೆ ಸಮಸ್ಯೆ ಉಂಟಾಗಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 2,15,362ಕ್ಕೆ ಹೆಚ್ಚಿದೆ.

ಆರೋಗ್ಯ ಸಾಧನ-ಸಲಕರಣೆ, ವೈದ್ಯಕೀಯ ಸೇವೆ ಕೊರತೆಯಾಗುತ್ತಿರುವ ಕಾರಣ ಜನರು ಕಂಗಾಲಾಗಿದ್ದಾರೆ. ಸೋಂಕಿತರ ಸಂಖ್ಯೆ ಏರುತ್ತಿದ್ದರೆ ಮುಂದಿನ ದಿನಗಳಲ್ಲಿ ಭಯಾನಕ ಸನ್ನಿವೇಶ ಎದುರಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಾರಕ ಕರೊನಾ ನಾಮಾವಶೇಷ ಆಗುವುದರೊಳಗೆ ನ್ಯೂಯಾರ್ಕ್​ನ 16 ಸಾವಿರ ಜನರನ್ನು ಬಲಿ ತೆಗೆದುಕೊಳ್ಳುತ್ತದೆ. ಅಮೆರಿಕದಲ್ಲಿ 93 ಸಾವಿರ ಜನರು ಮೃತರಾಗಲಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net