

ಬೆಲ್ಜಿಯಂ: ಹತ್ತೊಂಬತ್ತು ವರ್ಷದ ಪೈಲಟ್, ಬೆಲ್ಜಿಯನ್-ಬ್ರಿಟಿಷ್ ಯುವತಿ ಜರಾ ರುದರ್ಫೋರ್ಡ್ ಏಕಾಂಗಿಯಾಗಿ ಜಾಗತಿಕ ವಿಮಾನ ಹಾರಾಟ ನಡೆಸಿದ ಎರಡನೇ ಕಿರಿಯ ಮಹಿಳೆ ಎಂಬ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
ವಿಮಾನ ಹಾರಾಟ ಆರಂಭಿಸಿದ 155 ದಿನಗಳ ನಂತರ, ಪುಟ್ಟ ವಿಮಾನ ಗುರುವಾರ ಬೆಲ್ಜಿಯಂನ ಪಶ್ಚಿಮ ಭಾಗದ ನಗರದಲ್ಲಿ ಇಳಿದಾಗ ಜರಾ ರುದರ್ಫೋರ್ಡ್ ಈ ದಾಖಲೆಗೆ ಭಾಜನರಾದರು. ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ರುದರ್ಫೋರ್ಡ್ ಸ್ಥಾನ ಪಡೆಯಲಿದ್ದಾರೆ. ಈ ಹಿಂದೆ ಅಮೆರಿಕದ ಶಯೀಸ್ತಾ ವೇಯ್್ಝ ಎಂಬ 30 ವರ್ಷದ ಮಹಿಳೆ 2017ರಲ್ಲಿ ಈ ದಾಖಲೆ ಮಾಡಿದ್ದರು. ಏನಿದ್ದರೂ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ಯುವತಿ ಎಂಬ ದಾಖಲೆ ಬ್ರಿಟನ್ನ 18 ವರ್ಷದ ಟ್ರಾವಿಸ್ ಲೂಡ್ಲೋ ಹೆಸರಿನಲ್ಲಿದೆ.