ತಂದೆಯನ್ನೇ ಕೊಂದು ರಾತ್ರಿಯಿಡೀ ಶವ ಪಕ್ಕದಲ್ಲೇ ಮಲಗಿದ ಮಗ!

Untitled design - 2025-09-08T184320.145
Published on

ಆಸ್ತಿ ವಿವಾದ ಹಿನ್ನೆಲೆ ತಂದೆಯನ್ನೇ ಇಟ್ಟಿಗೆಯಿಂದ ಹೊಡೆದು ಕೊಂದ ಆರೋಪದ ಮೇಲೆ 19ರ ಯುವಕನನ್ನು ಉತ್ತರಪ್ರದೇಶದ ನೋಯ್ಡಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಶನಿವಾರ ರಾತ್ರಿ ಸರ್ಫಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೌತಮ್ (43) ತನ್ನ ಕೋಣೆಯಲ್ಲಿ ಮಲಗಿದ್ದಾಗ, ಅವರ ಮಗ ಉದಯ್(19) ಇಟ್ಟಿಗೆಯಿಂದ ತಲೆಗೆ ಪದೇ ಪದೇ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಆರೋಪಿ ಹಲ್ಲೆಯ ನಂತರ, ರಾತ್ರಿಯಿಡೀ ತನ್ನ ತಂದೆಯ ದೇಹದ ಪಕ್ಕದ ಕೋಣೆಯಲ್ಲಿ ಮಲಗಿದ್ದಾಗಿ ಒಪ್ಪಿಕೊಂಡಿದ್ದಾನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ತಿ ವಿವಾದದ ಜೊತೆಗೆ, ಮದ್ಯಪಾನ ಮತ್ತು ದೈನಂದಿನ ಖರ್ಚಿಗೆ ಹಣ ನೀಡಲು ತಂದೆ ನಿರಾಕರಿಸಿದ್ದೂ ಸಹ ತನ್ನನ್ನು ಕೊಲ್ಲಲು ಪ್ರೇರೇಪಿಸಿತು ಎಂದು ಉದಯ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net