ದೆಹಲಿಯಲ್ಲಿ 19 ರ ಯುವತಿ ನಿಗೂಢವಾಗಿ ನಾಪತ್ತೆ ; ತ್ವರಿತ ಕ್ರಮಕ್ಕೆ ಸಿಎಂ ಮಾಣಿಕ್ ಸಹಾ ಆದೇಶ| sneha-debnath

sneha-debnath
Published on

ನವದೆಹಲಿ: ಕಳೆದ 6 ದಿನಗಳಿಂದ ತ್ರಿಪುರದ 19 ವರ್ಷದ ಯುವತಿಯೊಬ್ಬಳು ದೆಹಲಿಯಲ್ಲಿ ನಾಪತ್ತೆಯಾಗಿದ್ದು, ಈ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡುವಂತೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಸೂಚಿಸಿದ್ದಾರೆ.

ಸ್ನೇಹಾ ದೇಬ್ನಾಥ್ ಎಂದು ಗುರುತಿಸಲಾದ ಈ ಯುವತಿ ದೆಹಲಿ ವಿಶ್ವವಿದ್ಯಾಲಯದ ಆತ್ಮ ರಾಮ ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಜುಲೈ 7, ಸೋಮವಾರದಂದು ಕೊನೆಯ ಬಾರಿಗೆ ತನ್ನ ಪೋಷಕೆ ಜೊತೆ ಮಾತನಾಡಿದ್ದಳು, ಬಳಿಕ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಮುಂದುವರೆದಿದೆ.

ಸ್ನೇಹಾ ದೇಬ್ನಾಥ್ ಕೊನೆಯ ಬಾರಿಗೆ ಜುಲೈ 7 ರ ಬೆಳಿಗ್ಗೆ ತನ್ನ ಕುಟುಂಬದೊಂದಿಗೆ ಮಾತನಾಡಿದ್ದಳು, ಪಿಟುನಿಯಾ ಎಂದು ಗುರುತಿಸಲ್ಪಟ್ಟ ತನ್ನ ಸ್ನೇಹಿತರೊಬ್ಬರೊಂದಿಗೆ ದೆಹಲಿಯ ಸರಾಯ್ ರೋಹಿಲ್ಲಾ ರೈಲ್ವೆ ನಿಲ್ದಾಣಕ್ಕೆ ಹೋಗುವುದಾಗಿ ಹೇಳಿದ್ದಳು. ಅದೇ ದಿನ ಬೆಳಗ್ಗೆ 8.45 ರ ಹೊತ್ತಿಗೆ, ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಲಾಗಿದೆ.

ತನಿಖೆಯಲ್ಲಿ ಸ್ನೇಹ ಕಳೆದ ನಾಲ್ಕು ತಿಂಗಳಿಂದ ಯಾವುದೇ ಬ್ಯಾಂಕ್ ವಹಿವಾಟು ನಡೆಸಿಲ್ಲ. ದೆಹಲಿಯಂತ ನಗರದಲ್ಲಿ ಆಕೆ ಹಣವಿಲ್ಲದೆ ಹೇಗೆ ವಾಸ ಮಾಡುತ್ತಿದ್ದಳು ಎಂಬ ಅನುಮಾನ ಮೂಡಿದೆ. ಆಕೆ ಯಾವುದೇ ವಸ್ತುಳನ್ನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳಲಾಗಿದೆ.

ಹಾಗಾಗಿ ಘಟನೆ ಬಗ್ಗೆ ಯುವತಿ ಪೋಷಕರು ತ್ರಿಪುರ ಸಿಎಂ ಮಾಣಿಕ್ ಸಹಾ ಅವರಿಗೆ ಮಾಹಿತಿ ನೀಡಿದ್ದು, ಮಾಣಿಕ್ ಸಹಾ ಅವರು ಸ್ನೇಹಾ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಆದೇಶ ಹೊರಡಿಸಿದ್ದಾರೆ.

ಗಾಬರಿಗೊಂಡಿದ್ದ ಪೋಷಕರು ಆಕೆಯ ಸ್ನೇಹಿತೆ ಪಿಟುನಿಯಾಳನ್ನು ಸಂಪರ್ಕಿಸಿದ್ದರು. ಸ್ನೇಹಾಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಳು ಎನ್ನಲಾಗಿದೆ. ಬಳಿಕ ದೆಹಲಿ ಪೊಲೀಸರು ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಆಕೆಯ ದೃಶ್ಯ ಸರಿಯಾಗಿ ಕಂಡುಬಂದಿಲ್ಲ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net