ಪ್ರಯಾಗ್​ರಾಜ್​ನಲ್ಲಿ ಅವಿತಿದ್ರು 19 ತಬ್ಲಿಘಿಗಳು, ಅವರಿಗೆ ಆಶ್ರಯ ಕೊಟ್ಟವರು 12 ಜನ: ಎಲ್ಲರೂ ಈಗ ಕಂಬಿ ಎಣಿಸ್ತಿದ್ದಾರೆ!

19 Tablighee arrested in prayagraj 21 APR 20
Published on

ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನ ಕರೇಲಿ, ಶಾಹ್​ಗಂಜ್​, ಶಿವ್​ಕುಟಿ ಎಂಬಲ್ಲಿ ಎರಡು ಮಸೀದಿಗಳಲ್ಲಿ ಅವಿತಿದ್ದ 19 ತಬ್ಲಿಘಿಗಳು ಮತ್ತು ಅವರಿಗೆ ಆಶ್ರಯ ನೀಡಿದ 12 ಜನ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್​ನಲ್ಲಿ ಭಾಗವಹಿಸಿದ್ದವರು ಈ 19 ಜನ. ಇವರ ಪೈಕಿ 16 ಮಂದಿ ವಿದೇಶೀಯರು. ಈ ಪೈಕಿ ಇಂಡೋನೇಷ್ಯಾದವರು 7, ಥಾಯ್ಲೆಂಡ್​ನವರು 9 ಜನ. ಇನ್ನುಳಿದಂತೆ, ಅಲಹಾಬಾದ್​ ಸೆಂಟ್ರಲ್ ಯೂನಿವರ್ಸಿಟಿಯ ಪ್ರೊಫೆಸರ್​ ಒಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇವರಲ್ಲದೆ, ಜಮಾತಿಗಳಿಗೆ ವಸತಿ ವ್ಯವಸ್ಥೆಯ ಹೊಣೆಗಾರಿಕೆ ಹೊತ್ತುಕೊಂಡ ಸೈನ್ಸ್ ಡಿಪಾರ್ಟ್​ಮೆಂಟ್​ನ ಪ್ರೊಫೆಸರ್ ಮೊಹಮ್ಮದ್ ಶಾಹಿದ್​ ಕೂಡ ಸೆರೆಯಾಗಿದ್ದಾರೆ. ನಗರದ ವಿವಿಧೆಡೆ ಜಮಾತಿಗಳಿಗೆ ರಹಸ್ಯವಾಗಿ ವಸತಿ ಒದಗಿಸುತ್ತಿದ್ದ ಆರೋಪದ ಮೇಲೆ 12 ಜನರನ್ನು ಬಂಧಿಸಲಾಗಿದೆ.

ಬಂಧಿತ ಇಂಡೋನೇಷ್ಯಾದ ತಬ್ಲಿಘಿಗಳ ಪೈಕಿ ಒಬ್ಬಾತನಿಗೆ ಈ ಹಿಂದೆ ಕರೊನಾ ಪಾಸಿಟಿವ್ ಆಗಿತ್ತು. ಬಳಿಕ ನೆಗೆಟಿವ್ ಬಂದ ಕಾರಣ ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net